Breaking News

ನಮ್ಮ ಶಾಲೆಯ ಚುನಾವಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ಪ್ರೀತಿ ಆರ್.ಕೆ. ರೈ

ಮತದಾನ ಎಂದರೆ ಜನರು ಅಭ್ಯರ್ಥಿಗಳ ಮೇಲೆ ಇರುವ ಅಭಿಪ್ರಾಯ ಮತ್ತು ನಂಬಿಕೆಗಳ ಮೂಲಕ ಆಯ್ಕೆ ಮಾಡುವ ಒಂದು ವಿಧಾನ .ದೇಶದ ಆಡಳಿತಕ್ಕೆ ಮತದಾನ ಇರುವಂತೆ ಶಾಲೆಗಳಲ್ಲಿಯೂ ಸಮರ್ಪಕವಾದ ಕೆಲಸಕಾರ್ಯಗಳಿಗಾಗಿ ಮಂತ್ರಿಗಳನ್ನು ಆರಿಸಲು ಚುನಾವಣೆಗಳು ನಡೆಯುತ್ತವೆ. ಮಂತ್ರಿಮಂಡಲಕ್ಕೆ ಬೇಕಾದ ಸದಸ್ಯರನ್ನು ವಿದ್ಯಾರ್ಥಿಗಳೇ ಆಯ್ಕೆ ಮಾಡುತ್ತಾರೆ .ಕೊರೋನಾ ಕಪಿಮುಷ್ಟಿಯಿಂದ ಶಾಲೆಗಳಲ್ಲಿ ಮತದಾನದ ಮೂಲಕ ಚುನಾವಣೆಗಳು ನಡೆಯದೇ ಹಲವು ವರ್ಷಗಳೇ ಕಳೆದಿದ್ದವು. ಆದ್ದರಿಂದ ಮತದಾನದ ದಿನ ನಮಗೆ ಬಹಳ ಸಂಭ್ರಮದ ದಿನವಾಗಿತ್ತು.

 

೨೦೨೨ -೨೩ ನೇ ಸಾಲಿನ ವಿದ್ಯಾರ್ಥಿ ಚುನಾವಣೆಗೆ ವಿದ್ಯಾರ್ಥಿಗಳಿಂದ ಶಿಸ್ತುಬದ್ಧವಾಗಿ ನಾಮಪತ್ರ ತೆಗೆದುಕೊಳ್ಳಲಾಗಿತ್ತು. ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳ ಆಯ್ಕೆಗಾಗಿ ಚುನಾವಣಾ ಕಣ್ಣ ಸಿದ್ಧಗೊಂಡಿತ್ತು. ಪ್ರಚಾರಗಳು ಬಹಳ ಭರದಿಂದಲೇ ನಡೆದಿದ್ದವು .೮ ೯ ಮತ್ತು ೧೦ನೇ ತರಗತಿಗಳ ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ನಿಂತಿದ್ದರು. ಮತದಾನದ ಮೂಲಕ ಆಯ್ಕೆ ಮಾಡಲು ಈ ಬಾರಿ ಚುನಾವಣೆ ತುಂಬಾ ವಿಭಿನ್ನವಾಗಿ ನಡೆದಿತ್ತು. ವಿಶೇಷವಾದ ಅನುಭವವೂ ಆಯಿತು .ಏಕೆಂದರೆ ಈ ಬಾರಿ ಣಚಿb ನಲ್ಲಿ ಮತ ಪೆಟ್ಟಿಗೆಯನ್ನು ಸಿದ್ಧಗೊಳಿಸಲಾಗಿತ್ತು .ಅಲ್ಲಿ ಅಭ್ಯರ್ಥಿ ಗಳ ಹೆಸರಿನ ಮುಂದಿರುವ ನೀಲಿ ಬಟನ್ ಒತ್ತಿದರೆ ಮತ ಬೀಳುತ್ತಿತ್ತು. ಪ್ರತಿ ವರ್ಷ ಕಾಗದದ ಮೂಲಕ ಅಭ್ಯರ್ಥಿಗಳ ಹೆಸರಿನ ಮುಂದೆ ನಾವು ಮತವನ್ನು ಗುರುತಿಸುವುದರ ಮೂಲಕ ಆರಿಸುತ್ತಿದ್ದೆವು.ಆದರೆ ಈ ವರ್ಷ ಭಾರತೀಯರು ಚುನಾವಣೆಗೆ ಮತಯಂತ್ರದ ಮೂಲಕ ಮತದಾನ ನೀಡುತ್ತಾರೋ ಅದೇ ರೀತಿ ನಮ್ಮ ಚುನಾವಣೆಯು ನಡೆಯಿತು .ನಮಗೆ ಹೇಗೆ ಮತ ಹಾಕುವುದು ಎಂದು ಮೊದಲು ತಿಳಿದಿರಲಿಲ್ಲ ಆದರೆ ಶಿಕ್ಷಕರ ಮಾರ್ಗದರ್ಶನದಿಂದ ಇದು ಸುಲಭವಾಯಿತು. ೧೮ ವರ್ಷವಾದ ಮೇಲೆ ಹೇಗೆ ಮತದಾನ ಮತದಾನ ಮಾಡಬೇಕೆಂಬ ಅನುಭವವೂ ಆಯಿತು. ಚುನಾವಣೆ ನಡೆಸಲು ಐದು ಜನರ ತಂಡವನ್ನು ನಿಯೋಜಿಸಲಾಗಿತ್ತು .
ಮೊದಲು ಅಭ್ಯರ್ಥಿಗಳನ್ನು ಕರೆದು ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಹೆಸರು ಹಾಗೂ ಯಾವುದೇ ಮತ ಇಲ್ಲವೆಂದು ಖಚಿತಪಡಿಸಲಾಯಿತು.ನಂತರ ವಿದ್ಯಾರ್ಥಿಗಳು ಸರತಿಯ ಸಾಲಿನಲ್ಲಿ ಬಂದು ಮತದಾನ ಕೇಂದ್ರದ ಒಳಗೆ ಗೌಪ್ಯವಾಗಿ ಯಂತ್ರದ ಮೂಲಕ ಮತ ಹಾಕಿದರು.ಚುನಾವಣಾ ಕಾರ್ಯಗಳೆಲ್ಲವೂ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು. ಚುನಾವಣಾಧಿಕಾರಿಗಳ ಕಾರ್ಯವನ್ನು ಶಿಕ್ಷಕರು ನಿರ್ವಹಿಸಿದರು ಚುನಾವಣೆ ನಡೆದ ನಂತರ ಮತಪೆಟ್ಟಿಗೆಯನ್ನು ಭದ್ರ ಕೊಟಡಿಯಲ್ಲಿ ಇಡಲಾಗಿತ್ತು. ನಂತರ ಅಭ್ಯರ್ಥಿಗಳಿಗೆ ಎಷ್ಟು ಮತ ದೊರಕಿದೆ ಎಂಬುದನ್ನು ಅಭ್ಯರ್ಥಿಗಳ ಎದುರು ತೋರಿಸಿದರು. ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಇದು ನಡೆಯಿತು. ಇದರಿಂದ ಯಾವುದೇ ಅಭ್ಯರ್ಥಿಗಳಿಗೂ ಬೇಸರವಾಗುವುದಿಲ್ಲ. ಫಲಿತಾಂಶಕ್ಕಾಗಿ ಕಾಯುವ ಅಗತ್ಯವೂ ಇರಲಿಲ್ಲ. ಚುನಾವಣೆ ನಡೆದ ತಕ್ಷಣ ಫಲಿತಾಂಶ ದೊರೆತದ್ದರಿಂದ ಎಲ್ಲಾ ಅಭ್ಯರ್ಥಿಗಳು ಮತ್ತು ವಿದ್ಯಾರ್ಥಿಗಳು ಸಂಭ್ರಮಪಟ್ಟರು. ನಾನೂ ಕೂಡ ಗೆದ್ದ ಪಟ್ಟಿಯಲ್ಲಿ ಇದ್ದೆನು. ವಯಸ್ಕ ಮತದಾನ ಪದ್ಧತಿ ಯಲ್ಲಿ ಯಂತ್ರದ ಮೂಲಕ ಇದೇ ರೀತಿ ಚುನಾವಣೆಗಳು ನಡೆಯುತ್ತದೆ ಎಂಬ ವಿಷಯವು ನಮಗೆ ಸ್ಪಷ್ಟವಾಯಿತು. ಅಲ್ಲದೆ ಮತಯಂತ್ರವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಜ್ಞಾನವು ನಮಗೆ ದೊರೆಯಿತು.

ಪ್ರೀತಿ.ಆರ್.ಕೆ.ರೈ
೧೦ ನೇ ತರಗತಿ
ಸರಕಾರಿ ಪ್ರೌಢ ಶಾಲೆ ಎಣ್ಮೂರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.