ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸುಳ್ಯ, ಸಂಪಾಜೆ ಒಕ್ಕೂಟದ ನೆಲ್ಲಿಕುಮೇರಿಯಲ್ಲಿ ಮಲ್ಲಿಗೆ ಎಂಬ ನೂತನ ಸಂಘದ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.
ಒಕ್ಕೂಟದ ಕಾರ್ಯದರ್ಶಿ ಯಶೋದಾ ಶ್ರೀಧರ್ ದೀಪಬೆಳಗಿಸಿ ಉದ್ಘಾಟಿಸಿದರು. ಮೇಲ್ವಿಚಾರಕ ಸುಧೀರ್ ನೆಕ್ರಾಜೆ ನೂತನ ಸಂಘದ ನಿಯಮಗಳನ್ನು ವಿವರಿಸಿ, ಶುಭ ಹಾರೈಸಿದರು. ಸೇವಾ ಪ್ರತಿನಿಧಿ ಜಯಲಕ್ಷ್ಮಿ ಸ್ವಾಗತಿಸಿ, ವಂದಿಸಿದರು. ಉಪಾಧ್ಯಕ್ಷೆ ನಳಿನಾಕ್ಷಿ ನೂತನ ಸಂಘದ ಸದಸ್ಯರಾದ ಮಾಧುರಿ, ಆಶಾ, ವಸಂತಿ, ಜಯಂತಿ, ನಾಗವೇಣಿ, ಶಂಕರಿ ಉಪಸ್ಥಿತರಿದ್ದರು.