ಸುಳ್ಯ ಜಯನಗರ ಹಿಂದೂ ರುದ್ರಭೂಮಿಯನ್ನು ಸುಳ್ಯ ರೋಟರಿ ಕ್ಲಬ್ ನವರು ರೂ. 15 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಿದ್ದು, ಅದರ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು.
ಮುಕ್ತಿಧಾಮ ವನ್ನು ಸಚಿವ ಎಸ್. ಅಂಗಾರರು ಉದ್ಘಾಟಿಸಿ ಸುಳ್ಯ ರೋಟರಿ ಸಂಸ್ಥೆಯವರ ಸಮಾಜಮುಖಿ ಸೇವೆಯನ್ನು ಪ್ರಶಂಸಿಸಿದರು. ಜಯನಗರ ಸ್ಮಶಾನಕ್ಕೆ ಬೇಕಾದ ಇನ್ನಿತರ ಅಭಿವೃದ್ಧಿ ಕಾರ್ಯಕ್ಕೆ ಒಂದು ತಿಂಗಳೊಳಗೆ ಅನುದಾನವನ್ನು ಕೊಡಿಸುವುದಾಗಿ ಭರವಸೆಯನ್ನು ನೀಡಿದರು.
ಬಳಿಕ ಮುಕ್ತಿಧಾಮ ವನ್ನು ನಗರ ಪಂಚಾಯತಿಗೆ ಹಸ್ತಾಂತರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸುಳ್ಯ ರೋಟರಿ ಸಂಸ್ಥೆಯ ಅಧ್ಯಕ್ಷ ರೋ. ಪ್ರಭಾಕರನ್ ನಾಯರ್ ವಹಿಸಿದ್ದರು. ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ರೋಟರಿ ಜಿಲ್ಲಾ ಗವರ್ನರ್ ರೋ. ಮೇಜರ್ ಡೋನರ್ ಪ್ರಕಾಶ್ ಕಾರಂತ್, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ ರೈ, ರೋ.ಜಿತೇಂದ್ರ ಎನ್ ಎ, ದೃಷ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ಭಟ್ ಕೊಡಂಕೇರಿ, ನಗರ ಪಂಚಾಯತ್ ಜಯನಗರ ವಾರ್ಡ್ ಸದಸ್ಯೆ ಶಿಲ್ಪಾ ಸುದೇವ್, ರೋಟರಿ ಕ್ಲಬ್ ಸುಳ್ಯ ಚೇರ್ಮನ್ ಕಸ್ತೂರಿ ಶಂಕರ್, ಕೋಶಾಧಿಕಾರಿ ಹರಿರಾಯ ಕಾಮತ್, ಕಾರ್ಯದರ್ಶಿ ಆನಂದ ಖಂಡಿಗ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯ ಇದರ ಸದಸ್ಯರು, ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.
ಹಿರಿಯರಾದ ಮಹಾಲಕ್ಷ್ಮಿ ಕೊರಂಬಡ್ಕ ಸ್ವಾಗತಿಸಿ, ಕಸ್ತೂರಿ ಶಂಕರ್ ವಂದಿಸಿದರು.