Breaking News

ಗುರುಂಪು ತಿರುವು ರಸ್ತೆ ತಿರುವಿನ ಸ್ಲ್ಯಾಬ್ ಕುಸಿತ ವರದಿ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕಾಂಗ್ರೆಸ್ ನಿಂದ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

ನ.ಪಂ.‌ನಿಂದ ಸ್ಲ್ಯಾಬ್ ದುರಸ್ತಿ ಕಾರ್ಯ

ಸುಳ್ಯದ ಗುರುಂಪು ತಿರುವಿನಲ್ಲಿ ಚರಂಡಿಗೆ ಹಾಸಲಾದ ಸ್ಲ್ಯಾಬ್ ತುಂಡಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿ ಎಂಬ ವರದಿ ಇಂದು ಬೆಳಗ್ಗೆ ಸುದ್ದಿ ವೆಬ್ ಸೈಟ್ ನಲ್ಲಿ ಪ್ರಕಟವಾಗುತ್ತಿದ್ದಂತೆ, ಕಾಂಗ್ರೆಸ್ ವತಿಯಿಂದ ಸ್ಲ್ಯಾಬ್ ದುರಸ್ತಿ ಗಾಗಿ ಪ್ರತಿಭಟನೆ ನಡೆದ ಹಾಗೂ ವರದಿ ಪ್ರಕಟಗೊಂಡ ಕೆಲವೇ ಸಮಯದಲ್ಲಿ ಎಚ್ಚೆತ್ತ ನ.ಪಂ. ಜೆಸಿಬಿ ತಂದು ಸ್ಲ್ಯಾಬ್ ಸರಿಪಡಿಸಿದ ಘಟನೆ ನಡೆದಿದೆ.

 

ಸುಳ್ಯ ಗಾಂಧಿನಗರದ ಆಲೆಟ್ಟಿ ಕ್ರಾಸ್‌ನಲ್ಲಿ ರಸ್ತೆ ಮಧ್ಯೆ ಚರಂಡಿಯ ಸ್ಲಾಬ್ ತುಂಡಾಗಿ ಈ ರಸ್ತೆಯ ಮೂಲಕ ಚಲಿಸುವ ವಾಹನ ಸವಾರರು, ಪಾದಚಾರಿಗಳು, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಗ್ಗೆ ಸ್ಥಳೀಯ ಸಾರ್ವಜನಿಕರಿಂದ ಮಾಹಿತಿ ತಿಳಿದು ಸುದ್ದಿ ವೆಬ್ ಸೈಟ್ ನಲ್ಲಿ ಸಚಿತ್ರ ವರದಿ ಪ್ರಕಟವಾಯಿತು.

 

ಕಾಂಗ್ರೆಸ್ ಪ್ರತಿಭಟನೆ
ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಘಟನಾಸ್ಥಳದಲ್ಲಿ ಜಮಾವಣೆಗೊಂಡು ಸ್ಥಳದಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಂಚಾಯತಿ ಸದಸ್ಯ ಶರೀಫ್ ಕಂಠಿ “ಸುಳ್ಯ ಕೆಲವು ಸಮಯಗಳ ಹಿಂದೆ ವಿದ್ಯುತ್ ಕೇಬಲ್ ಅಳವಡಿಕೆಗೆ ತೆಗೆದ ಬೃಹತ್ ಹೊಂಡ ಸರಿಯಾಗಿ ಮುಚ್ಚದೆ ಮಳೆ‌ ಬಂದಾಗ ಕೆಸರು ತುಂಬಿ ಹಲವು ಸಮಯದಿಂದ ತೀವ್ರ ಸಮಸ್ಯೆ ತಂದೊಡ್ಡುತಿದೆ. ಈಗ ಇದರ ಸಮೀಪದಲ್ಲಿ ಚರಂಡಿಗೆ ಅಳವಡಿಸಿದ ಸ್ಲಾಬ್ ಕುಸಿದು ತೀರ ಅಪಾಯಕಾರಿ ಹೊಂಡ‌ ನಿರ್ಮಾಣವಾಗಿದೆ. ಇದನ್ನು ಕೂಡಲೇ ಸರಿಪಡಿಸಬೇಕೆಂದು ಆಗ್ರಹಿಸಿದರು.

ನಗರ ಪಂಚಾಯತ್ ಮಾಜಿ ಸದಸ್ಯ ಕೆ.ಗೋಕುಲ್‌ದಾಸ್, ಆಲೆಟ್ಟಿ ಗ್ರಾ.ಪಂ.ಸದಸ್ಯರಾದ ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಆಡಿಂಜ, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ಶಶಿಧರ, ಹನೀಫ್ ಬೀಜದಕೊಚ್ಚಿ, ಚಂದ್ರಶೇಖರ ಕೋಲ್ಚಾರು ಮತ್ತಿತರರು ಉಪಸ್ಥಿತರಿದ್ದರು. ಕುಸಿದ ಸ್ಲಾಬ್ ಕೂಡಲೇ ಸರಿಪಡಿಸಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.

ನ.ಪಂ. ಸ್ಪಂದನೆ
ಚರಂಡಿಯ ಸ್ಲ್ಯಾಬ್ ಕುಸಿದು ಸಾರ್ವಜನಿಕ ರಿಗೆ ತೊಂದರೆ ಆಗುತ್ತಿರುವ ವಿಷಯ ತಿಳಿದ
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಕ್ಷಣ ಸ್ಪಂದಿಸಿದರು. ಸ್ಥಳಕ್ಕೆ ಬಂದ ಅವರು ಜೆ.ಸಿ.ಬಿ. ಯನ್ನು ತರಿಸಿ ಮುರಿದು ಬಿದ್ದ ಸ್ಲಾಬ್ ನ್ನು ತೆರವುಗೊಳಿಸಿ ಹೊಸ ಸ್ಲ್ಯಾಬ್ ನ್ನು ಅಳವಡಿಸಿ ದುರಸ್ತಿ ಕಾರ್ಯಕೈಗೆತ್ತಿಕೊಂಡು, ಸಂಚಾರ ಸುಗಮವಾಗಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.