Breaking News

ನಿಂತಿಕಲ್ಲು : ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಎನ್.ಎಸ್.ಎಸ್. ನೂತನ ಘಟಕ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ನಿಂತಿಕಲ್ಲು ಕೆ.ಎಸ್.ಗೌಡ ಸಂಸ್ಥೆಯ ಅಧೀನದಲ್ಲಿರುವ ಶ್ರೀ ಪರಿವಾರ ಪಂಚಲಿಂಗೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ನೂತನ ಎನ್.ಎಸ್.ಎಸ್. ಘಟಕ ಉದ್ಘಾಟನಾ ಕಾರ್ಯಕ್ರಮವು ಜೂ.24ರಂದು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಆಡಳಿತ ಮಂಡಳಿ ಸದಸ್ಯರಾದ ಕುಮಾರಸ್ವಾಮಿ ಕೆ.ಎಸ್.ಅಧ್ಯಕ್ಷತೆ ವಹಿಸಿದ್ದರು.

ಕೆ.ಎಸ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸದಾನಂದ ರೈ ಕೂವೆಂಜ, ಕೆ.ಎಸ್.ಜಿ.ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕ ಉಮೇಶ್ ಗೌಡ ಎಚ್.ರವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕ-ರಕ್ಷಕ ಸಮಿತಿ ಅಧ್ಯಕ್ಷ ಚಂದ್ರಪ್ರಕಾಶ್ ಪಡ್ಪು, ಉಪಾಧ್ಯಕ್ಷೆ ಪ್ರೇಮಲತ, ತರಬೇತಿ ಅಧಿಕಾರಿ ಸುಧೀರ್, ಕಿರಿಯ ತರಬೇತಿ ಅಧಿಕಾರಿ ಹಾಗೂ ಎನ್.ಎಸ್.ಎಸ್. ಅಧಿಕಾರಿ ರೂಪಾ ಜೆ. ವೇದಿಕೆಯಲ್ಲಿದ್ದರು. ಆಡಳಿತ ಸಮಿತಿ ಸದಸ್ಯ ಕುಮಾರಸ್ವಾಮಿ ದೀಪ ಪ್ರಜ್ವಲನೆ ಮಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯವನ್ನು ರೂಪಿಸುವ ಬಗ್ಗೆ ಹೇಳಿದರು. ಐ.ಟಿ.ಐ. ಪ್ರಾಂಶುಪಾಲರಾದ ಗುರುಪ್ರಸಾದ್ ತೋಟರವರು ಶೈಕ್ಷಣಿಕ ವಿಚಾರವಾಗಿ ಪ್ರಸ್ತಾವನೆಗೈದರು. ಪಠ್ಯೇತರ ಚಟುವಟಿಕೆ, ಕ್ರೀಡಾ ಸಾಂಸ್ಕೃತಿಕ ಇನ್ನಿತರ ಕಲೆಗಳಲ್ಲಿ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರಥಮ ದ್ವಿತೀಯವಾಗಿ ಶೀಲ್ಡ್, ಸ್ಮರಣಿಕೆ, ಪ್ರಮಾಣಪತ್ರ ಪದಕ ಪ್ರದಾನ ಮಾಡಿ ಪ್ರೋತ್ಸಾಹಿಸಲಾಯಿತು.

ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಪಠ್ಯೇತರವಾಗಿ ಸಂಸ್ಥೆ ವಿದ್ಯಾರ್ಥಿಗಳು ತರಬೇತಿ ಪಡೆದು ಸಿಂಗಾರಿ ಮೇಳ ಮತ್ತು ಕೊಳಲುವಾದನ ಪ್ರದರ್ಶಿಸಿದರು. ಜೆ.ಟಿ.ಓ. ಪ್ರಸನ್ನ ವೈ.ಟಿ. ಮತ್ತು ವಿದ್ಯಾರ್ಥಿ ವಚನ್ ಎ.ಸಿ. ಕಾರ್ಯಕ್ರಮ ನಿರೂಪಿಸಿದರು. ಜೆ.ಟಿ.ಓ. ಶ್ರೀಮತಿ ಶ್ವೇತಾ ಎ.ಪ್ರತಿಭಾ ಪುರಸ್ಕಾರದವರ ಪಟ್ಟಿ ವಾಚಿಸಿದರು. ವಿದ್ಯಾರ್ಥಿ ಅಕ್ಷತಾ ಕೆ.ಸ್ವಾಗತಿಸಿದರು. ವಿದ್ಯಾರ್ಥಿನಿ ಚೈತ್ರ ತಂಡ ಪ್ರಾರ್ಥಿಸಿದರು. ಅಶ್ವಿತ್ ಎಮ್.ಆರ್.ಎ.ಸಿ. ವಿದ್ಯಾರ್ಥಿ ವಂದಿಸಿದರು.
(ವರದಿ : ಸಂಕಪ್ಪ ಸಾಲ್ಯಾನ್ ಅಲೆಕ್ಕಾಡಿ)

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.