ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ ವಸ್ತು ಮಾದರಿ ರಚನೆ ಮೇಳವು ಜೂ. 25ರಂದು ನಡೆಯಿತು.
ಈ ಸಂದರ್ಭದಲ್ಲಿ ಐವರ್ನಾಡು,ಜಾಲ್ಸೂರು, ಶಾಂತಿನಗರ, ಪಯಸ್ವಿನಿ ಶಾಲೆಯ ವಿಜ್ಞಾನ ಶಿಕ್ಷಕರಾದ ನಾರಾಯಣ, ಪೂರ್ಣಿಮಾ,ಪವಿತ್ರ, ಜಯಪ್ರಕಾಶ್, ನಿರ್ಣಾಯಕರಾಗಿ ಸಹಕರಿಸಿದರು. ವಿಜ್ಞಾನ ಮಾದರಿಗಳು ಜೀವನದಲ್ಲಿ ಪ್ರಗತಿಯನ್ನು ಕೊಡುತ್ತದೆ ಮತ್ತು ಪರಿಸರದಲ್ಲಿನ ಬದಲಾವಣೆಗೆ ವಿಜ್ಞಾನ ಉಪಕರಣಗಳು ಸಹಕಾರ ಎಂದು ನಾರಾಯಣ ಮತ್ತು ಪೂರ್ಣಿಮಾ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕಿ ತೇಜಸ್ವಿ ಸ್ವಾಗತಿಸಿ, ಗಿರೀಶ್ ಕುಮಾರ್ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕಿ ಪೂರ್ಣಿಮ ಜಯಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.