Breaking News

  ಅನ್ಸಾರಿಯಾ ಸ್ಕೂಲ್ ಆಫ್ ತಹ್ಫೀಲುಲ್ ಕುರ್ ಆನ್ ಉದ್ಘಾಟನೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದೀಗ ಸ್ಕೂಲ್ ಆಫ್ ತಹ್ಫೀಲುಲ್ ಕುರ್ ಆನ್ ಎಂಬ ಯೋಜನೆಗೆ ಚಾಲನೆ ನೀಡಿದೆ. ಜೂನ್ 14 ರಂದು ಸಂಸ್ಥೆಯ ಅಧ್ಯಕ್ಷರಾದ ಹಾಜಿ ಕೆ ಎಂ ಅಬ್ದುಲ್ ಮಜೀದ್ ಜನತಾರವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಗಾಂಧಿನಗರ ಕೇಂದ್ರ ಜುಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಯ್ಯದ್ ಕುಂಞಕೋಯ ತಂಙಳ್ ಸಹದಿ ದುಅಗೈದರು. ಹಿಫ್ಳುಲ್ ಕುರ್ ಆನ್ ಅಧ್ಯಾಪಕರಾದ ಮುಹಮ್ಮದ್ ರಈಸ್ ಅಲ್ ಅಮಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಅನ್ಸಾರಿಯಾ ದಅವಾ ಕಾಲೇಜು ಪ್ರಾಂಶುಪಾಲರಾದ ಅಬೂಬಕರ್ ಹಿಮಮಿ ಸಖಾಫಿ ವಿಟ್ಲ, ವ್ಯವಸ್ಥಾಪಕರಾದ ಮುಹಮ್ಮದ್ ಉವೈಸ್ ಬೀಟಿಗೆ, ಅಧ್ಯಾಪಕರಾದ ಸಯ್ಯಿದ್ ಹುಸೈನ್ ಸಅದಿ ತಂಙಳ್, ಹಂಝತುಲ್ ಕರ್ರಾರ್ ಮುಈನಿ ಸಖಾಫಿ, ನೌಶಾದ್ ಮದನಿ, ಗ್ರೀನ್ ವ್ಯೂವ್ ಶಾಲಾ ಮುಖ್ಯೋಪಾಧ್ಯಾಯರಾದ ಅಬ್ದುಲ್ ರಹೀಂ ಸರ್ , ಗಾಂಧಿನಗರ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ ಕೆ ಎಂ ಮುಸ್ತಫಾ ಜನತಾ,ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಾಧಿಕಾರಿ ಆದಂ ಹಾಜಿ ಕಮ್ಮಾಡಿ, ನಿರ್ದೇಶಕರುಗಳಾದ ಕಲಾಂ ಹಾಜಿ ಕಟ್ಟೆಕ್ಕಾರ್ಸ್, ಶುಕೂರ್ ಹಾಜಿ, ಅಬ್ದುಲ್ ಖಾದರ್ ಹಾಜಿ ಪಟೇಲ್,ಅಬ್ದುಲ್ಲಾ ಅಡ್ಕತ್ತಬೈಲ್
ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಅನ್ಸಾರಿಯಾ ಜುಮಾ ಮಸೀದಿ ಖತೀಬ್ ಉಮರ್ ಮುಸ್ಲಿಯಾರ್ ಮರ್ದಾಳ ಸ್ವಾಗತಿಸಿ ಅಬ್ದುಲ್ಲಾ ಹಿಮಮಿ ಸಖಾಫಿ ನಿರೂಪಿಸಿ ವಂದಿಸಿದರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.