ಮೊನ್ನೆಗಿಂತಲೂ ವಿಸ್ತಾರ; ಗುಡುಗಿನ ಶಬ್ದದೊಂದಿಗೆ ಅದುರಿದ ನೆಲ
ಕೆಲವು ದಿನಗಳ ಹಿಂದೆಯಷ್ಟೆ ಕೊಡಗು ದಕ್ಷಿಣ ಕನ್ನಡ ಗಡಿ ಪ್ರದೇಶದಲ್ಲಿ ಕಂಪಿಸಿ ಆತಂಕ ಸೃಷ್ಟಿಸಿದ್ದ ಭೂಮಿ ಈಗಷ್ಟೇ 7.45 ರ ವೇಳೆಗೆ ಮತ್ತೆ ಕಂಪಿಸಿದೆ.
ಮೊನ್ನೆಗಿಂತಲೂ ಅಧಿಕ ವ್ಯಾಪ್ತಿಯಲ್ಲಿ, ಅಧಿಕ ಪ್ರಖರತೆಯಲ್ಲಿ, ಗುಡುಗಿನ ರೀತಿಯ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿದೆ.
ಮನೆಯೊಳಗಿದ್ದವರಿಗೆ ಮನೆಯೇ ಅದುರಿದ ಅನುಭವವಾಗಿದೆ. ತಕ್ಷಣದಿಂದಲೇ ಸುದ್ದಿ ವರದಿಗಾರರಿಗೆ ಜನ ಫೋನಾಯಿಸಿ ತಮ್ಮ ಅನುಭವ ಹೇಳಿಕೊಳ್ಳುತ್ತಿದ್ದಾರೆ. ವಾಟ್ಸಾಪ್ ಗಳಲ್ಲೂ ಇದರದ್ದೇ ಸುದ್ದಿ.
ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಐನೆಕಿದು,ಗುತ್ತಿಗಾರು, ನಾಲ್ಕೂರು, ಮಾವಿನಕಟ್ಟೆ, ಗುಳಿಕ್ಕಾನ ಗಳಲ್ಲಿ ಭೂಕಂಪನ
ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು, ಐನೆಕಿದು,ಗುತ್ತಿಗಾರು, ನಾಲ್ಕೂರು, ಮಾವಿನಕಟ್ಟೆ, ಗುಳಿಕ್ಕಾನ ಗಳಲ್ಲಿ ಇಂದು ಬೆಳಗ್ಗೆ 7.45 ಕ್ಕೆ ಭೂಕಂಪನ ಆಗಿದೆ.
ಸುಮಾರು 15 ಸೆಕುಂಡು ಭೂಮಿ ಕಂಪಿಸಿರುವುದಾಗಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗುಳಿಕ್ಕಾನದ ರೋಶನ್, ಸಾಲ್ತಾಡಿಯ ಉಣ್ಣಿಕೃಷ್ಣ, ಗುತ್ತಿಗಾರಿನ ಸುಹಾಸ್, ದಾಸನಕಜೆಯ ಸೀತಾರಾಮ, ಕೊಲ್ಲಮೊಗ್ರದ ಕಮಲಾಕ್ಷ ಪೆರ್ನಾಜೆ, ಸುಳ್ಯ ಪ್ರಕಾಶ್, ಹರಿಹರದ ದಿವಾಕರ ಮುಂಡಾಜೆ ಮತ್ತಿತರರು ತಮ್ಮ ತಮ್ಮ ಪ್ರದೇಶದಲ್ಲಿ ಭೂಮಿ ಕಂಪಿಸಿರುವ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.
ಮಡಪ್ಪಾಡಿ ಮರ್ಕಂಜ ದಲ್ಲಿ ಭೂಮಿ ಕಂಪನ
ಇಂದು ಬೆಳಿಗ್ಗೆ ಭೂಮಿ ಕಂಪಿಸಿದ ಅನುಭವವನ್ನು ಮಡಪ್ಪಾಡಿ ಮರ್ಕಂಜದ ಗ್ರಾಮಸ್ಥರು ಸುದ್ದಿಗೆ ಕರೆ ಮಾಡಿ ಅನುಭವಗಳನ್ನು ಹಂಚಿಕೊಂಡರು.
ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಮಡಪ್ಪಾಡಿಯ ಸೋಮಶೇಖರ ಕೇವಳ ಹೇಳಿದರು.
ನಾನು ಮಡಪ್ಪಾಡಿ ಪೇಟೆಯಲ್ಲಿದ್ದೆ. ಆದರೆ ನನಗೆ ಯಾವುದೇ ಅನುಭವವವಾಗಲಿಲ್ಲ. ನನ್ನ ಮನೆಯವಲ್ಲಿ ಅನುಭವವಾಗಿದೆ. ಮನೆಯವರು ಮಕ್ಕಳು ಗಾಬರಿಯಿಂದ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ವಾಸುದೇವ ನಡುಬೆಟ್ಟು ಹೇಳಿದರು.
“ನನಗೆ ಮೊನ್ನೆ ಏನೂ ಅನುಭವವಾಗಿಲ್ಲ. ಇಂದು ಕಂಪಿಸಿದ ಅನುಭವವಾಗಿದೆ. ಮಕ್ಕಳೆಲ್ಲ ಮನೆಯಿಂದ ಹೊರಗೆ ಬಂದಿದ್ದಾರೆ. ಭಾರೀ ಸೌಂಡ್ ಕೇಳಿದಂತಾಗಿ ಅದುರಿದೆ ಎಂದು ಮರ್ಕಂಜದ ಚರಣ್ ಕಾಯರ ಹೇಳಿದರು. ಹಾಗೂ ಶಾಂತಪ್ಪ ರೈ ಅಂಗಡಿಮಜಲು,
ಪ್ರವೀಣ್ ಮರ್ಕಂಜ, ಜನಾರ್ಧನ ಮುಂಡೋಡಿಯವರು ನೆಲ್ಲೂರು ಕೆಮ್ರಾಜೆಯ ಲಕ್ಷ್ಮಣ ಬೊಳ್ಳಾಜೆ, ಜನಾರ್ಧನ ಬೊಳ್ಳಾಜೆಯವರು ತಮ್ಮ ಅನುಭವ ಹಂಚಿಕೊಂಡರು. ಅಲ್ಲದೇ ಚೆಂಬು ಗ್ರಾಮದ ಮೋನಪ್ಪ ಎಂಬವರು ದೂರವಾಣಿ ಕರೆ ಮಾಡಿ ಮನೆಯ ಹಂಚು ಬಿದ್ದ ಬಗ್ಗೆಯೂ ಹಂಚಿಕೊಂಡರು.
ಮನೆಯಿಂದ ಹೊರ ಬಂದ ಜನರು
ಈ ಬಾರಿ ಏನೋ ಒಂದು ಆಗುತ್ತದೆ
ಮೊನ್ನೆಯೂ ಭೂಮಿ ಕಂಪನ ಆಗಿದೆ. ಇಂದು ಭೂಕಂಪನ ಆಗಿದೆ. ಇದೆಲ್ಲ ನೋಡುವಾಗ ಏನೋ ಒಂದು ಈ ಬಾರಿ ಆಗುತ್ತದೆ ಎಂದು ಅನಿಸುತ್ತದೆ ಎಂದು ಪೆರಾಜೆಯ ಪೀಚೆ ಅಶೋಕ್ ಅಭಿಪ್ರಾಯ ಹೇಳಿಕೊಂಡರೆ, “ನಾನು ಚಯರ್ ನಲ್ಲಿ ಕುಳಿತಿದ್ದೆ ಚಯರ್ ತೂಗುಯ್ಯಾಲೆಯಂತಾಗಿದೆ. ಎಲ್ಲರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ” ಎಂದು ಗಾಂಧಿನಗರದಿಂದ ಲಿಂಗಪ್ಪ ಗೌಡರು ಅಭಿಪ್ರಾಯ ಹೇಳಿದ್ದಾರೆ. ಅರಂತೋಡಿನಿಂದ ಹರಿಪ್ರಸಾದ್ ಅಡ್ತಲೆ, ಆಲೆಟ್ಟಿಯಿಂದ ಉದ್ಯಮಿ ಶ್ರೀನಾಥ್ ಆಲೆಟ್ಟಿ, ಸುಂದರ ಆಲೆಟ್ಟಿ, ಪ್ರಸನ್ನ ಬಡ್ಡಡ್ಕ, ಸುನಿಲ್ ಗುಂಡ್ಯ, ಸೀತಾರಾಮ ಮೈಂದೂರು, ರಾಜೇಶ್ ರೈ ಉಬರಡ್ಕ, ಸಂದೇಶ ರಂಗತ್ತಮಲೆ, ನ್ಯಾಯವಾದಿ ಸತೀಶ್ ಕುಂಭಕ್ಕೋಡು, ನಗರ ಪಂಚಾಯತ್ ಸದಸ್ಯ ರಾಧಾಕೃಷ್ಣ ಬೂಡು, ಕೃಷಿಕ ಶಿವರಾಮ ಕೇರ್ಪಳ, ಜನಾರ್ದನ ಚೊಕ್ಕಾಡಿ, ಕಾಂತಮಂಗಲದಿಂದ ಶಿಕ್ಷಕಿ ಆಶಾ ಅಂಬೆಕಲ್ಲು, ಎಲಿಮಲೆಯಿಂದ ಮುಖ್ಯ ಶಿಕ್ಷಕಿ ರೂಪವಾಣಿ ಶ್ರೀಧರ್, ಅಜ್ಜಾವರದಿಂದ ಸೂರ್ಯ ಮುಂಡೋಳಿಮೂಲೆ, ಸುಳ್ಯದಿಂದ ಗೀತಾ ಲೋಹಿತ್, ನಂದರಾಜ್ ಸಂಕೇಶ, ಬೂಡಿನಿಂದ ಕವಿತಾ ಟೀಚರ್ ರವರು ದೂರವಾಣಿ ಮೂಲಕ ಅನುಭವ ಹೇಳಿದ್ದಾರೆ.
ಮರ್ಕಂಜದಲ್ಲಿ ಭೂ ಕಂಪನ ಆಗಿದಂತೆ ಮನೆಯವರು ಮನೆಯಿಂದ ಹೊರಬಂದಿದ್ದಾರೆ. ನನಗೂ ಕರೆ ಮಾಡಿ ಹೇಳಿದ್ದಾರೆ ಎಂದು ಮರ್ಕಂಜದವರಾಗಿದ್ದು ಮೈಸೂರಿನಲ್ಲಿ ನೆಲೆಸಿರುವ ಕೃಷ್ಣಪ್ರಸಾದ್ ಅಡಿಕೆಹಿತ್ಲು ಕರೆ ಮಾಡಿ ಹೇಳಿಕೊಂಡಿದ್ದಾರೆ.
ನಾನು ತೋಟದಲ್ಲಿದ್ದೆ. ಭಾರೀ ಸೌಂಡ್ ಕೇಳಿತು. ಆಗ ಮಗ ಭೂಕಂಪ… ಭೂಕಂಪ… ಎಂದು ಹೇಳಿದ. ಸುಮಾರು 30 ಸೆಕೆಂಡ್ ಕಂಪಿಸಿದ ಅನುಭವವಾಯಿತು ಎಂದು ಮಡಪ್ಪಾಡಿಯ ಎಂ.ಡಿ.ವಿಜಯಕುಮಾರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಟೆನ್ ವೀಲ್ಹ್ ವಾಹನ ಹೋಗುವಾಗ ಆಗುವ ಶಬ್ದದಂತ ಅನುಭವವಾಗಿದೆ. ಮಗ ಚಾ ಕುಡಿಯುತ್ತಿದ್ದ ಪ್ಲೇಟ್ ಅಲ್ಲಾಡಿದನ್ನು ಕಂಡು ಆತನೂ ನನ್ನ ಬಳಿ ಬಂದು ಅನುಭವ ಹೇಳಿಕೊಂಡಿದ್ದಾನೆ. ಮೊನ್ನೆ ಆದುದಕ್ಕಿಂತಲೂ ಹೆಚ್ಚಿನ ಕಂಪನ ಆಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಹೇಳಿದ್ದಾರೆ.
ಜೀವನದಲ್ಲಿ ಭೂಕಂಪನದ ಅನುಭವವನ್ನು ಅನುಭವಿಸಿದ ವಿಶೇಷತೆ ಕಂಡಿದೆ. ತೂಗು ತೊಟ್ಟಿಲಲ್ಲಿ ಕುಳಿತ ಅನುಭವವಾಯಿತು.
ಅಬ್ದುಲ್ ರಹಿಮಾನ್ ಎಸ್ ವೈ
ಹಳೆಗೇಟು
ಮರ್ಕಂಜ ಪರಿಸರದಲ್ಲಿ ಇಂದು ಮುಂಜಾನೆ 7.45ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ” ನಾವೆಲ್ಲ ಮನೆಯೊಳಗೆ ಇದ್ದೆವು.ಭೂಮಿ ಕಂಪಿಸುತ್ತಾ, ಭೂಮಿಯೊಳಗೆ ಭಾರಿ ಸದ್ದು ಕೇಳಿಸುತ್ತಿತ್ತು.ನಾವೆಲ್ಲ ಮನೆಯಿಂದ ಹೊರಕ್ಕೆ ಬಂದೆವು. ಸೆಡ್ಡ್ ನಲ್ಲಿದ್ದ ನಮ್ಮ ಕಾರು ಕೂಡ ಭೂಮಿ ಕಂಪನದಿಂದ ಅಲುಗಾಡುತ್ತಿತ್ತು’. ಎಂದು ಮರ್ಕಂಜದ ನವೀನ್ ದೊಡ್ಡಿಹಿತ್ಲು ರವರು ಅನುಭವನ್ನು ಪತ್ರಿಕೆಗೆ ಹಂಚಿಕೊಂಡಿದ್ದಾರೆ.
ಪಂಜದಲ್ಲಿ ಭೂಮಿ ಕಂಪಿಸಿದ ಅನುಭವ
ಪಂಜ ಸಮೀಪದ ಕೂತ್ಕುಂಜ ಗ್ರಾಮದ ಕಕ್ಯಾನ ಎಂಬಲ್ಲಿ ಜೂ.28 ರಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. “ನಾನು ಮನೆಯ ಅಂಗಳದಲ್ಲಿ ಇದ್ದೆ ಭೂಮಿ ಯೊಳಗೆ ಸ್ವಲ್ಪ ಹೊತ್ತು ಸದ್ದು ಕೇಳಿಸಿತು” ಎಂದು ಜೇಸಿ ಸುಬ್ರಹ್ಮಣ್ಯ ಕಕ್ಯಾನ ರವರು
ಕಂಪನದ ಅನುಭವನ್ನು ಪತ್ರಿಕೆಗೆ ತಿಳಿಸಿದ್ದಾರೆ.ಇನ್ನೂ ಪಂಜ ಪರಿಸರದಲ್ಲಿ ಕೆಲವರಿಗೆ ಭೂಮಿ
ಕಂಪಿಸಿದ ಸಣ್ಣನೆ
ಅನುಭವಗಳು ಆಗಿರುವುದಾಗಿ ತಿಳಿಸಿದ್ದಾರೆ.
ಟೆನ್ ವೀಲ್ಹ್ ವಾಹನ ಹೋಗುವಾಗ ಆಗುವ ಶಬ್ದದಂತ ಅನುಭವವಾಗಿದೆ. ಮಗ ಚಾ ಕುಡಿಯುತ್ತಿದ್ದ ಪ್ಲೇಟ್ ಅಲ್ಲಾಡಿದನ್ನು ಕಂಡು ಆತನೂ ನನ್ನ ಬಳಿ ಬಂದು ಅನುಭವ ಹೇಳಿಕೊಂಡಿದ್ದಾನೆ. ಮೊನ್ನೆ ಆದುದಕ್ಕಿಂತಲೂ ಹೆಚ್ಚಿನ ಕಂಪನ ಆಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್ ಹೇಳಿದ್ದಾರೆ.
ಉಬರಡ್ಕದಲ್ಲಿ ರಬ್ಬರ್ ತೋಟ ಅಲುಗಿದೆ – ತೀರ್ಥರಾಮ ಕೆದಂಬಾಡಿ
ಸುಳ್ಯ ಕೆ.ಎಸ್.ಆರ್.ಟಿ.ಸಿ ಡಿಪೋ ದಲ್ಲಿ ಅಲುಗಿದ ಅನುಭವ : ಜಗದೀಶ್ ಕಿರ್ಲಾಯ
ಟಿ.ಸಿ.ksrtc
ನನಗೆ ಕಂಪನದ ಅನುಭವ ವಾಯಿತು. – ವಿನಯ ಕುಮಾರ್ ಕಂದಡ್ಕ
ಭೂಮಿ ಕಂಪನದ ಅನುಭವವಾಯಿತು – ಅವಿನಾಶ್ ಕುಕ್ಕುಜಡ್ಕ
ಕಿಟಕಿಗೆ ಬಡಿದರೆ ಅಲುಗಾಡುವಂತೆ ಗ್ಲಾಸ್ ಗಳೆಲ್ಲ ಅಲುಗಾಡಿದೆ : ಬಾಲಗೋಪಾಲ ಸೇರ್ಕಜೆ
ಒಮ್ಮೆ ಹಿಂದೆ ಮುಂದೆ ಹೋದ ಹಾಗೆ ಆಯಿತು : ಮುರಳೀಧರ ಅಡ್ಕಾರು
ಹಳಿಗೆಟು ಅಡ್ಕದಲ್ಲಿ ಮನೆಯ ಅಡುಗೆ ಕೋಣೆಯಲ್ಲಿ ಗ್ಯಾಸ್ ಸಿಲೆಂಡರ್ ಅಲುಗಾಡಿದ ದೃಶ್ಯ ಕಂಡು ಭಯಬೀತನಾದೆ : ಶಂಸುದ್ದೀನ್ ಮೂಸ
ಮೊಗರ್ಪಣೆ ಪರಿಸರದಲ್ಲಿ ಭೂಕಂಪನದ ಅನುಭವ ಬಂದಿದೆ : ಹಾಫಿಲ್ ಶೌಕತ್ ಅಲಿ ಸಕಾಫಿ
ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಶಿವಪ್ರಸಾದ್ ಗುಂಡ್ಯ ರವರು ಭೂ ಕಂಪನದ ವಿಷಯ ತಿಳಿದು ಸುದ್ದಿಗೆ ದೂರವಾಣಿ ಕರೆ ಮಾಡಿದರು. ಅವರ ಮನೆ ಆಲೆಟ್ಟಿ ಗುಂಡ್ಯದಲ್ಲಿದ್ದು ಅವರ ತಾಯಿ ಶಾರದಾ ರವರಿಗೆ ಕಂಪನದ ಅನುಭವವಾಗಿದೆ ಎಂದು ತಿಳಿಸಿದರು.
ನಾನು ಪ್ರಥಮ ಮಹಡಿಯಲ್ಲಿ ಕುಳಿತು ಮಂಚಕ್ಕೆ ಒರಗಿ ಪತ್ರಿಕೆ ಓದುತ್ತಿದ್ದೆ. ಕೆಳಮಹಡಿಯಲ್ಲಿ ಬೈಕ್ ಹೋದಂತೆ ಶಬ್ದ ಕೇಳಿಸಿತು. ಮಂಚ ಅಲುಗಾಡಿತು. ನೆಲಮಹಡಿಗೆ ಓಡಿಬಂದೆ. ಅಲ್ಲಿ ಅಡಿಗೆ ಕಾರ್ಯದಲ್ಲಿ ನಿರತರಾಗಿದ್ದ ಅತ್ತೆಗೆ ಗೊತ್ತಾಗಲಿಲ್ಲವಂತೆ. ಆದರೆ ಅಮ್ಮನಿಗೆ ಕಮಾಡೊ ಅಲುಗಿದ ಅನುಭವವಾಗಿ ಅವರು ಅವರು ಟಾಯ್ಲೆಟ್ ನಿಂದ ಕೂಡಲೆ ಹೊರಗೆ ಬಂದಿದ್ದಾರೆ. – ಡಾ.ಲೀಲಾಧರ್ ಡಿ.ವಿ.
ನನ್ನ ತಂಗಿ ಮನೆ ಕಲ್ಲುಗುಂಡಿಯಲ್ಲಿದೆ. ಅಲ್ಲಿ ಮನೆ ಇಡೀ ಅದುರಿದೆ. ಮನೆಯವರು ಹೆದರಿ ಹೋಗಿದ್ದಾರೆ. – ರಾಧಾಕೃಷ್ಣ ಬೊಳ್ಳೂರು.
ನಾನು ನನ್ನ ಕಾಂತಮಂಗಲದ ಮನೆಯಲ್ಲಿದ್ದೆ. ಬೆಳಿಗ್ಗೆ 7.45. ಗಯಾಂ ಎಂದು ಸೌಂಡ್ ಬಂತು. ಮನೆ ಇಡೀ ಅದುರಿತು. – ಚಂದ್ರಶೇಖರ ಕಾಂತಮಂಗಲ
ಇವತ್ತು ಮೊನ್ನೆಗಿಂತ ಹೆಚ್ಚು ಕಂಪನವಿತ್ತು. ನನಗೆ ಅದುರಿದ ಅನುಭವವಾದಾಗ ಹೊರಗೆ ಬಂದು ಇತರ ಮನೆಯವರನ್ನು ವಿಚಾರಿಸಿದಾಗ ಅವರಿಗೂ ಕಂಪನದ ಅನುಭವವಾದುದನ್ನು ಹೇಳಿದರು. – ಉನ್ನಿಕೃಷ್ಣನ್ ಗುತ್ತಿಗಾರು.
ನನ್ನ ಮನೆಯ ಎದುರುಗಡೆಗೆ ಅಳವಡಿಸಿದ ಶೀಟ್ ಗಳು ಗಡಗಡ ಅಲುಗಾಡಿದವು. – ಸೀತಾನಂದ ಬೇರ್ಪಡ್ಕ
ನಮ್ಮ ಮನೆಯಲ್ಲಿ ಕೂಡ ಭೂಮಿ ಕಂಪಿಸಿದ ಅನುಭವ ವಾಯಿತು. – ಜೋಸೆಫ್ ಸೋಣಂಗೇರಿ
ನಾನು ಫೋನಿನಲ್ಲಿ ಮಾತನಾಡುತ್ತಿದ್ದ ಸಂದರ್ಭ ನನ್ನ ಮಕ್ಕಳು ಓಡಿಬಂದು ಅಪ್ಪ ಭೂಮಿ ಅಲುಗಾಡುತ್ತಿದೆ ಎಂದು ಹೇಳಿದರು, ನಾನು ಮನೆಯ ಮೇಲ್ ಮಾಡಿ ಗೆಯಲ್ಲಿ ಇದ್ದೆ.
ಕಸ್ತೂರಿ ಶಂಕರ್ ನಿಸರ್ಗ ಇಂಡಸ್ಟ್ರೀಸ್ ಜಯನಗರ
ಇವತ್ತು ಅಂಗಡಿಗೆ ರಜೆಯಾದುದರಿಂದ ನಾನು ಮಲಗಿಕೊಂಡಿದ್ದೆ. ಮನೆ ಪಕ್ಕದ ರಸ್ತೆಯಲ್ಲಿ ವೆಹಿಕಲ್ ಹೋದಂತೆ ಶಬ್ದ ಕೇಳಿಸಿತು. ಮಲಗಿದಲ್ಲಿ ಕಂಪನವಾಗಿ ಒಂದು ಕ್ಷಣ ಗಾಳಿಯಲ್ಲಿ ತೇಲಿದಂತೆ ಅನುಭವವಾಯಿತು. – ಗುರುಪ್ರಸಾದ್ ಬಳಂಜ. ಕಾನತ್ತಿಲ ಜಟ್ಟಿಪಳ್ಳ.
ಜೀವನದಲ್ಲಿ ಭೂಕಂಪನದ ಅನುಭವವನ್ನು ಅನುಭವಿಸಿದ ವಿಶೇಷತೆ ಕಂಡಿದೆ. ತೂಗು ತೊಟ್ಟಿಲಲ್ಲಿ ಕುಳಿತ ಅನುಭವವಾಯಿತು.
ಅಬ್ದುಲ್ ರಹಿಮಾನ್ ಎಸ್ ವೈ
ಹಳೆಗೇಟು
ನಾನು ಮನೆಯಲ್ಲಿದ್ದೆ, ಶಬ್ದ ದೊಂದಿಗೆ ಅಲುಗಾಡಿದ ಅನುಭವವಾಗಿದೆ. ಮನೆಗೆ ಹಾಕಿದ ಶೀಟ್ ಅಲುಗಾಡಿದೆ. ಮಲಗಿದ ಮಂಚ ಕೂಡ ಅಲುಗಾಡಿದ ಹಾಗೆ ಆಗಿದೆ.
ವಿಜಯ ಪಡ್ಡಂಬೈಲು
ಕುಕ್ಕುಜಡ್ಕ ಪರಿಸರದಲ್ಲಿ ಬೆಳಿಗ್ಗೆ 7.44 ರ ಹೊತ್ತಿಗೆ ಭೂಮಿ ಕಂಪಿಸಿದ ಅನುಭವವಾಯಿತು. ಡಾ.ಜಯಪ್ರಸಾದ್ ಆನೆಕಾರು
ನಮ್ಮಲ್ಲಿಗೆ ಯಾವುದೋ ವಾಹನ ಬಂತು ಎಂದು ಮಗಳು ಹೇಳಿದಳು.ಆದರೆ ವಾಹನ ಬಂದದಲ್ಲ ಆದು ಭೂಮಿಯೊಳಗೆ ಬಂದ ಸದ್ದು ಆಗಿತ್ತು.ಈ ವೇಳೆ ಭೂಮಿ ಕಂಪಿಸಿದ ಅನುಭವವಾಗಿದೆ : ಶ್ರೀಮತಿ ಸುಮಾ ಕುದ್ವ
ಮನೆಯ ಎದುರುಗಡೆ ಹಾಕಿದ ಶೀಟ್ ಅಲುಗಾಡಿತು.
ಆಗ ಜೋರಾಗಿ ಶಬ್ಧ ಕೇಳಿಸಿತು. ನಾವು ಹೊರಗೆ ಬಂದೆವು – ಮುರಳಿ ಬೀಮಾಜಿಗೊಡ್ಲು