೨೦೨೨-೨೩ನೆ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ಪ್ರಣವ್ ಕೆ.ಯು., ಉಪಾಧ್ಯಕ್ಷರಾಗಿ ಹತ್ತನೆ ತರಗತಿಯ ಸನಾ ಫಾತಿಮಾ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ಆಯಿಷತ್ ವಫಾ, ಜತೆ ಕಾರ್ಯದರ್ಶಿಯಾಗಿ ಒಂಬತ್ತನೆ ತರಗತಿಯ ಖದೀಜತ್ ಅಝೀಲಾ ಕೆ.ಎ., ಕ್ರೀಡಾ ಕಾರ್ಯದರ್ಶಿಗಳಾಗಿ ಪಿಯುಸಿ ವಿಭಾಗದಿಂದ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಹರ್ಷಿತ್ ಕೆ.ಡಿ., ಪ್ರೌಢಶಾಲಾ ವಿಭಾಗದಿಂದ ೮ನೆ ತರಗತಿಯ ವಿದಿಶಾ ಬಿ.ಕೆ., ಪ್ರಾಥಮಿಕ ಶಾಲಾ ವಿಭಾಗದಿಂದ ೭ನೆ ತರಗತಿಯ ಶಮ್ಮಾರh ಎಸ್., ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಪ್ರೌಢಶಾಲಾ ವಿಭಾಗದಿಂದ ೮ನೆ ತರಗತಿಯ ಆಯಿಷತ್ ಹನ್ನಾ, ಪ್ರಾಥಮಿಕ ಶಾಲಾ ವಿಭಾಗದಿಂದ ೬ನೆ ತರಗತಿಯ ಶಂತನುಕೃಷ್ಣ ಕೆ.ಎ. ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳನ್ನು ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದ್ದಾರೆ. ಚುನಾವಣಾಧಿಕಾರಿಯಾಗಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಅಮೃತಾ ಎಸ್. ನಾಯಕ್ ಸಹಕರಿಸಿದ್ದರು.