ಗುರುವಾರ ಮಧ್ಯಾಹ್ನ ಆಗಮನ, ಶುಕ್ರವಾರ ಬೆಳಿಗ್ಗೆ ನಿರ್ಗಮನ
ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ರವರು ಜೂನ್ 3೦ರಿಂದ ಜುಲೈ 2ರವರೆಗೆ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದು, ಜೂ. 3೦ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ.
ಚನ್ನಪಟ್ಟಣದಿಂದ ಮಧ್ಯಾಹ್ನ 12.45 ಕ್ಕೆ ಕುಕ್ಕೆಸುಬ್ರಹ್ಮಣ್ಯದ ಅತಿಥಿಗೃಹಕ್ಕೆ ಆಗಮಿಸುವ ರಾಜ್ಯಪಾಲರು ಅಪರಾಹ್ನ 3 ಗಂಟೆಗೆ ಸರಕಾರಿ ಸವಲತ್ತುಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ರಾತ್ರಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಜುಲೈ 1 ರಂದು ಬೆಳಿಗ್ಗೆ 6 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಳ ಸಂದರ್ಶಿಸಲಿದ್ದಾರೆ. ಬೆಳಿಗ್ಗೆ 9.3೦ಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ ಮಡಿಕೇರಿಗೆ ನಿರ್ಗಮಿಸಲಿದ್ದಾರೆ.