ಅಮರಮುಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಿಪ್ಪಿಲ ಮೂಡೆಕಲ್ಲು ಮಂಗಲ್ಪಾಡಿ ಪರಸರದ ನಾಗರಿಕರು ಈ ಭಾಗದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮತದಾನ ಬಹಿಷ್ಕಾರದ ಬ್ಯಾನರ್ ನ್ನು ಅಳವಡಿಸಿರುತ್ತಾರೆ.
ಅಮರಪಡ್ನೂರು ಗ್ರಾಮದ ಕಣಿಪ್ಪಿಲದಿಂದ ಸುಬ್ರಹ್ಮಣ್ಯ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಮೂಡೆಕಲ್ಲು ಮಂಗಲ್ಪಾಡಿ ಪುಳಿಮಾರಡ್ಕ ರಸ್ತೆಯ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದಿರುವ ಹಾಗೂ ಮೂಡೆಕಲ್ಲು ಎಂಬಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅಳವಡಿಸದಿರುವ ಮತ್ತು ಬೀದಿದೀಪ ಅಳವಡಿಸದೇ ಇರುವುದನ್ನು ಕಣಿಪ್ಪಿಲದಲ್ಲಿ ಸಾರ್ವಜನಿಕ ಬಸ್ಸು ತಂಗುದಾಣ ನಿರ್ಮಿಸಿಲ್ಲ. ಈ ಪರಿಸರದ ಎಲ್ಲಾ ನಿವಾಸಿಗಳಿಗೆ ನಳ್ಳಿ ನೀರಿನ ಸೌಕರ್ಯ ಒದಗಿಸಿಲ್ಲ. ಪಂಚಾಯತ್ ನಿಂದ ದೊರಕುವ ಸೌಲಭ್ಯಗಳ ಹಾಗೂ ಯೋಜನೆಯ ಮಾಹಿತಿ ಸಕಾಲದಲ್ಲಿ ಸಿಗುತ್ತಿಲ್ಲ ಎಂಬ ಹಲವು ಬೇಡಿಕೆಗಳ ಬರಹಗಳಿರುವ ಮತದಾನ ಬಹಿಷ್ಕಾರದ ಬ್ಯಾನರ್ ನ್ನು ಪರಿಸರದ ನಾಗರಿಕರು ಸಾರ್ವಜನಿಕ ಪ್ರದೇಶದಲ್ಲಿ ಅಳವಡಿಸಿರುವ ಘಟನೆ ವರದಿಯಾಗಿದೆ.