ನೂತನ ಸಮಿತಿ ರಚನೆ
ನೂರುಲ್ ಇಸ್ಲಾಂ ಮದ್ರಸ ಮೊಗರ್ಪಣೆ ಇದರ ಎಸ್ ಬಿಎಸ್ ವಾರ್ಷಿಕ ಮಹಾಸಭೆಯು ಸದರ್ ಮುಅಲ್ಲಿಂ ಮುಹಮ್ಮದ್ ಸಖಾಫಿ ರವರ ಅಧ್ಯಕ್ಷತೆಯಲ್ಲಿ ಮದ್ರಸ ಸಭಾಂಗಣದಲ್ಲಿ ನಡೆಯಿತು.
ಅಧ್ಯಾಪಕರಾದ ಯೂಸುಫ್ ಮುಸ್ಲಿಯಾರ್ ರವರು ದುಆ ನೆರವೇರಿಸಿದರು. ಹಂಝ ಸಖಾಫಿ ಸ್ವಾಗತಿಸಿದರು. ಸದರ್ ಉಸ್ತಾದ್ ಮುಹಮ್ಮದ್ ಸಖಾಫಿ ಉದ್ಘಾಟಿಸಿದರು.
ಈ ವೇಳೆ 2022–23ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಜಾಸಿಂ ಕಾರ್ಯದರ್ಶಿಯಾಗಿ ಮುಹಮ್ಮದ್ ಶಫೀಕ್ ಕೋಶಾಧಿಕಾರಿಯಾಗಿ ಮುಹಮ್ಮದ್ ಮಿನ್ಹಾಜ್ ಹಾಗೂ ಉಪಾಧ್ಯಕ್ಷರಾಗಿ ಅಝ್ಮಾನ್, ಮುಹಮ್ಮದ್ ಅಫೀಲ್ ಜೊತೆ ಕಾರ್ಯದರ್ಶಿಗಳಾಗಿ ಅಜ್ಮಲ್,ಶಮ್ಮಾಸ್ ಎಂಬವರನ್ನು ಆಯ್ಕೆ ಮಾಡಲಾಯಿತು.
ಮದ್ರಸ ಮುಖ್ಯ ನಾಯಕನಾಗಿ ಮುಹಮ್ಮದ್ ಅಫೀಲ್ ರವರನ್ನು ಆಯ್ಕೆ ಮಾಡಲಾಯಿತು. ಎಸ್ ಬಿ ಎಸ್ ಸಂಚಾಲಕರಾಗಿ ನಾಸಿರ್ ಸಖಾಫಿ ರವರನ್ನು ನೇಮಿಸಲಾಯಿತು. ಮದ್ರಸ ಅಧ್ಯಾಪಕರಾದ ಮೂಸ ಮುಸ್ಲಿಯಾರ್ ಮೇನಾಲ ಉಪಸ್ಥಿತರಿದ್ದರು.