ತಾಯಿ ಮೃತ್ಯು- ಅದೃಷ್ಟವಶಾತ್ ಬದುಕುಳಿದ ಮಗಳು
ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ತಾಯಿ ಮಗಳ ಜೊತೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿ, ಮಗಳು ಅದೃಷ್ಟವಶಾತ್ ಬದುಕುಳಿದ ಘಟನೆ ವರದಿಯಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ದಯಾನಂದ ಎಂಬವರ ಪತ್ನಿ ಎನ್ನೆಂಸಿಯಲ್ಲಿ ಕ್ಲರ್ಕ್ ಆಗಿರುವ ಗೀತಾ ತನ್ನ 4 ವರ್ಷದ ಮಗಳು ಪೂರ್ವಿಕಾಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಮುಂಜಾನೆ ಮನೆಯವರು ಎದ್ದಾಗ ದಯಾನಂದರವರ ಪತ್ನಿ ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡುಬಂತು. ಮಗಳು ಬಾವಿಯೊಳಗೆ ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿರುವುದಾಗಿ ತಿಳಿದು ಬಂದಿದೆ.