Breaking News

ಸುಳ್ಯ: ಭೂಕಂಪನಕ್ಕೆ ತಾಲೂಕಿನ ಕೆಲವು ಕಡೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಆರೋಪ

ಕ್ರಮಕೈಗೊಳ್ಳದಿದ್ದಲ್ಲಿ ತಾಲೂಕು ಕಚೇರಿಯ ಮುಂಭಾಗ ಧರಣಿ ನಡೆಸುವ ಎಚ್ಚರಿಕೆ

ಸುಳ್ಯ ತಾಲೂಕಿನಲ್ಲಿ ಕಳೆದ ಒಂದು ವಾರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು ಇದಕ್ಕೆ ಅಕ್ರಮವಾಗಿ ನಡೆಯುತ್ತಿರುವ ಕಲ್ಲು ಗಡಿಗಾರಿಕೆ ಗಳೇ ಕಾರಣ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆ ಆರೋಪಿಸಿದೆ.
ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಇದನ್ನು ತಕ್ಷಣ ನಿಲ್ಲಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ  ಜಿಲ್ಲಾಧಿಕಾರಿಯವರಿಗೆ, ಸುಳ್ಯ ತಹಶೀಲ್ದಾರ್  ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ದಿನಾಂಕ 28/4/2022 ರಂದು ಮನವಿ ಪತ್ರ ಕೊಟ್ಟು ಮನವಿ ಮಾಡಲಾಗಿತ್ತು.

ಆದರೆ ಮನವಿ ಮಾಡಿ ಇಷ್ಟು ದಿನ ಕಳೆದರು ಯಾವುದೇ ಒಂದು ಕ್ರಮ ಕೈಗೊಂಡಿಲ್ಲ.
ನಿನ್ನೆ ತಾಲೂಕಿನ ಎಲ್ಲಾ ಕಡೆ ಭೂಕಂಪದ ಅನುಭವ ಎರಡು ಬಾರಿ ಆಗಿದೆ ಇದೆಲ್ಲ ಆಗಲು ಕಾರಣ ಈ ಗಣಿಗಾರಿಕೆಯಾಗಿದೆ. ಗಣಿಗಾರಿಕೆಗೆ ಬಳಸುವ ಸ್ಪೋಟದಿಂದ ಭೂಮಿಯ ಆಳದಲ್ಲಿ ಹದರಿ ಕೊಂಡಿರುತ್ತದೆ.. ಆದ್ದರಿಂದ ಈ ರೀತಿಯ ಸಣ್ಣಪುಟ್ಟ ಭೂಕಂಪನಗಳು ಉಂಟಾಗುವ ಸಂದರ್ಭ ಭೂಮಿಯ ಕಂಪನದ ತೀವ್ರತೆ ಹೆಚ್ಚಾಗುತ್ತದೆ. ಅಧಿಕಾರಿಯವರು ಗಣಿಗಾರಿಕೆಗೆ ಪರ್ಮಿಷನ್ ಕೊಟ್ಟು ಈಗ ಕೈ ಕಟ್ಟಿ ಕುಳಿತುಕೊಂಡಿದ್ದಾರೆ. ಆದ್ದರಿಂದ ಮರ್ಕಂಜದ ಸ್ಥಳೀಯರ ಕಷ್ಟಗಳು ನಿಮಗೆ ಹೇಗೆ ತಿಳಿಯಬೇಕು.


ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಆ ಗಣಿಗಾರಿಕೆಯನ್ನು ನಿಲ್ಲಿಸಬೇಕು ಒಂದು ವೇಳೆ ನಿಲ್ಲಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ದ ಜು.4ರಂದು ಗಣಿಗಾರಿಕೆಯ ವಿರುದ್ಧ ಧರಣಿ ಮಾಡಲಿದ್ದೇವೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಸುಂದರ ಪಾಟಾಜೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.