ಮಂಡೆಕೋಲು ಗ್ರಾಮದ ಸ.ಕಿ.ಪ್ರಾ.ಶಾಲೆ ಕಲ್ಲಡ್ಕದ 2022-23 ನೇ ಸಾಲಿ ಮಂತ್ರಿಮಂಡಲ ರಚನೆಯು ಇತ್ತೀಚೆಗೆ ನಡೆಯಿತು. ಮುಖ್ಯಮಂತ್ರಿಯಾಗಿ ಸಾತ್ವಿಕ್ ಪಿ., ಉಪಮುಖ್ಯಮಂತ್ರಿಯಾಗಿ ಧನ್ಯಶ್ರೀ ಆಯ್ಕೆಯಾದರು. ಶಿಕ್ಷಣ ಮಂತ್ರಿಯಾಗಿ ನಿಯಂತ್ ಕೆ.ಯು., ಕ್ರೀಡಾ ಮಂತ್ರಿಯಾಗಿ ಮೋನೀಶ್ ಕೆ.ಯು., ಗೃಹಮಂತ್ರಿಯಾಗಿ ಮೋನೀಶ್ ಕುಮಾರ್ ಕೆ., ಸಾಂಸ್ಕೃತಿಕ ಮಂತ್ರಿಯಾಗಿ ಅನುಷ್ಕಾ ಪಿ.ಸಿ., ಗ್ರಂಥಾಲಯ ಮಂತ್ರಿಯಾಗಿ ಸುಜನ್ ಕೆ., ಆರೋಗ್ಯ ಮಂತ್ರಿಯಾಗಿ ಧನುಷ್ ಕೆ., ನೀರಾವರಿ ಮಂತ್ರಿಯಾಗಿ ಚಿಂತನ ಎಂ.ಡಿ. ಹಾಗೂ ವಿರೊಧ ಪಕ್ಷ ನಾಯಕಿಯಾಗಿ ಜಾಹ್ನವಿ ಕೆ. ಆಯ್ಕೆಯಾದರು.