ಯುವಕನ ವಿರುದ್ಧ ಪ್ರಕರಣ ದಾಖಲು
ಅಪ್ರಾಪ್ತ ಯುವತಿಯ ಜತೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಯುವತಿ ಗರ್ಭವತಿಯಾಗಿದ್ದು, ಯುವಕನ ವಿರುದ್ಧ ಸುಳ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಾವರ ಗ್ರಾಮದ ಕಾಂತಮಂಗಲ ಸಮೀಪದ ಯುವತಿಯ ಮನೆಯವರು ಇದೀಗ ಪೋಲೀಸರಿಗೆ ದೂರು ನೀಡಿದ್ದು, ಪುತ್ತೂರು ಗ್ರಾಮದ ಅರಿಯಡ್ಕ ನಿವಾಸಿ ಸಂದೀಪ (22) ಎಂಬಾತನ ವಿರುದ್ಧ ದೂರು ದಾಖಲಾಗಿದೆ.
ಯುವತಿಗೆ ಯುವಕ ದೂರದ ಸಂಬಂಧಿಯಾಗಬೇಕಿದ್ದು, ಅವರಿಬ್ಬರು ಕೆಲ ಸಮಯದಿಂದ ದೂರವಾಣಿ ಮೂಲಕ ಮಾತನಾಡುತ್ತಿದ್ದರೆಂದು ಕೆಲ ತಿಂಗಳ ಹಿಂದೆ ಯುವತಿಯ ದೊಡ್ಡಪ್ಪನ ಮನೆಯಲ್ಲಿ ಮಾರಿಪೂಜೆಗೆ ಸಂದೀಪ ಬಂದಿದ್ದನೆಂದೂ ರಾತ್ರಿ ವೇಳೆ ಅಪ್ರಾಪ್ತ ಯುವತಿಯ ಮೇಲೆ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದನೆಂದೂ ಈ ವಿಷಯ ಹೇಳಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನೆಂದು ದೂರಿನಲ್ಲಿ ತಿಳಿಸಲಾಗಿದೆ.
ಜೂ.22 ರಂದು ಯುವತಿಗೆ ಹೊಟ್ಟೆ ಬಂದು ಆಕೆಯ ಅಕ್ಕ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸ್ಕ್ಯಾನಿಂಗ್ ನಡೆಸಿದ ಸಂದರ್ಭ ಆಕೆ ಗರ್ಭಿಣಿ ಯಾಗಿರುವುದು ತಿಳಿದು ಬಂತು. ಆಕೆಯನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದ್ದು ಬಳಿಕ ಪೋಲೀಸರಿಗೆ ದೂರು ನೀಡಲಾಗಿದೆ. ಜೂ.28 ರಂದು ಸಂದೀಪನ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ