ಕಾಲು ಮುರಿತಕ್ಕೊಳಗಾಗಿ ಅಸಹಾಯಕ ಸ್ಥಿತಿಯಲ್ಲಿರುವ ಮುಪ್ಪೇರ್ಯ ಗ್ರಾಮದ ಮುಪ್ಪೇರ್ಯ ಅಕ್ಕಮ್ಮ ಎಂಬವರಿಗೆ ತಾಲೂಕು ಗೌಡ ಸಂಘದ ಬಾಳಿಲ ಗ್ರಾಮ ಸಮಿತಿ ವತಿಯಿಂದ ರೂ. 12,000/- ಧನಸಹಾಯವನ್ನು ಜೂ. 27ರಂದು ನೀಡಲಾಯಿತು.
ಗೌಡ ಕೊಡಪಾಲರ ಮನೆಯಲ್ಲಿ ಈ ಬಗ್ಗೆ ಸಭೆ ನಡೆಸಿ ಬಳಿಕ ಧನ ಸಂಗ್ರಹಿಸಿಲಾಯಿತು. ಗೌಡ ಸಂಘ ತಾಲೂಕು ಉಪಾಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಮುಪ್ಪೇರ್ಯ ಗ್ರಾಮ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೊಳಜಿಂಕೋಡಿ, ಪರಶುರಾಮ ಕಾಯರದೊಡ್ಡಮನೆ, ಪದ್ಮನಾಭ ಗೌಡ ಬಿಳಿಯಾರು ಮುಪ್ಪೇರಿಯ, ಗಂಗಾಧರ ಗೌಡ ಕಾಯರ, ಶೇಖರ ಗೌಡ ಕಾಯರ, ಸಂಜೀವ ಗೌಡ ಬದಿವನ, ಕೌಶಿಕ್ ಕೊಡಪಾಲ, ಕಾರ್ತಿಕ್ ಬದಿವನ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.