ಬಳ್ಪ ಗ್ರಾಮ ಪಂಚಾಯತ್ ನ ಆದರ್ಶ ಸಂಜೀವಿನಿ ಒಕ್ಕೂಟದ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭ ಜೂ. 29ರಂದು ಪಂಚಾಯತ್ ನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಮೋಹಿನಿ ವಹಿಸಿದ್ದರು.
ಸಭೆಯಲ್ಲಿ ಕಡಬ ತಾಲೂಕು ಸಂಯೋಜಕರಾದ ಜಗತ್ ಭಾಗವಹಿಸಿ ಮಹಿಳಾ ಜೀವನೋಪಾಯ ಚಟುವಟಿಕೆಗಳು, ಮಹಿಳಾ ಸಬಲೀಕರಣ ಹಾಗೂ ರೈತ ಮಹಿಳಾ ಸಂಘ ಮಾಡುವ ಬಗ್ಗೆ, ಹಾಗೂ ಎನ್.ಆರ್.ಎಲ್.ಎಂ.ನ ಹಲವಾರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ಮುಖ್ಯ ಪುಸ್ತಕ ಬರಹಗಾರರಾದ ಶ್ರೀಮತಿ ಯಮುನಾ ಕಾರ್ಜ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೇವತಿ ಹಾಗೂ ಶ್ರೀಮತಿ ಲಲಿತಾ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ಎಸ್. ರೈ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ ಬಿ, ಉಪಾಧ್ಯಕ್ಷೆ ಶ್ರೀಮತಿ ನೇತ್ರಾವತಿ ಹೊಪ್ಪಾಳೆ ಪಂಚಾಯತ್ ಸದಸ್ಯರುಗಳಾದ ಚಂದ್ರಶೇಖರ ಅಕ್ಕೇಣಿ ಶ್ರೀಮತಿ ಶೈಲಜಾ, ರಾಜೀವ್ ಕಣ್ಕಲ್, ಪ್ರಶಾಂತ್ ಪೊಟ್ಟುಕೆರೆ , ಶ್ರೀಮತಿ ಸುನೀತಾ ಸಂಪ್ಯಾಡಿ ಶ್ರೀಮತಿ ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೀವಿನಿ ಒಕ್ಕೂಟದ ನೂತನ ಪದಾಧಿಕಾರಿಗಳಾದ ಶ್ರೀಮತಿ ಮೋಹಿನಿ ಎಂ. ಪಲ್ಲತ್ತಡ್ಕ , ಶ್ರೀಮತಿ ಅಮೃತ ಅರ್ಗುಡಿ , ಶ್ರೀಮತಿ ಚೈತ್ರಾ ಕಾರ್ಜ , ಶ್ರೀಮತಿ ಭಾಗ್ಯಲಕ್ಷ್ಮಿ ಅಗೋಳಿಬೈಲು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯವನ್ನು ಸಂಗ್ರಹಿಸಲು ಸಂಜೀವಿನಿ ಒಕ್ಕೂಟದ ಸದಸ್ಯರ ಸಮ್ಮುಖದಲ್ಲಿ ವಿಲೇವಾರಿ ಬ್ಯಾಗ್ಗಳನ್ನು ಬಿಡುಗಡೆಗೊಳಿಸಲಾಯಿತು.