Breaking News

ಸುಬ್ರಹ್ಮಣ್ಯದ 16 ಮಂದಿ ಬಿಕ್ಷುಕರು ಪುನರ್ವಸತಿ ಕೇಂದ್ರಕ್ಕೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗ್ರಾಮ ಪಂಚಾಯತ್  ವತಿಯಿಂದ ಕಾರ್ಯಾಚರಣೆ

 

 

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಜೂ.29 ರಂದು ಕಾರ್ಯಾಚರಣೆ ನಡೆಸಿದ್ದು,
ಸುಬ್ರಹ್ಮಣ್ಯದಲ್ಲಿ ಬಿಕ್ಷೆ ಬೇಡುತ್ತಿದ್ದ 16 ಬಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಿದ್ದಾರೆ.

ಮಂಗಳೂರಿನ ಪುನರ್ವಸತಿ ಕೇಂದ್ರವನ್ನು ಸಂಪರ್ಕಿಸಿದ ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ ಗ್ರಾ.ಪಂ ಆಡಳಿತ ಮಂಡಳಿಯ ಸಹಕಾರದಲ್ಲಿ ಬಿಕ್ಷುಕರನ್ನು ಕಲೆ ಹಾಕಿ ಪುನರ್ವಸತಿ ಕೇಂದ್ರದವರನ್ನು ಕರೆಸಿ ನಿನ್ನೆ
ಬೆಳಗ್ಗೆಯಿಂದ ಕೆಲಸ ಆರಂಭಿಸಿದ್ದಾರೆ.
ಪುನರ್ವಸತಿ ಕೇಂದ್ರದಿಂದ ಬಂದ ವಾಹನದಲ್ಲಿ ಸುಬ್ರಹ್ಮಣ್ಯ ಪೇಟೆಯಾದ್ಯಂತ ಅಲ್ಲಲ್ಲಿ ಬಿಕ್ಷೆ ಬೇಡುತಿದ್ದ16 ಜನ ಬಿಕ್ಷುಕರನ್ನು ವಾಹನದಲ್ಲಿ ಹಾಕಿ ಮಂಗಳೂರಿನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿ ಡಿ ಒ ಯು ಡಿ ಶೇಖರ್, ಗ್ರಾ.ಪಂ ಸದಸ್ಯರುಗಳಾದ ವೆಂಕಟೇಶ್ ಎಚ್ ಎಲ್, ಭಾರತಿ ದಿನೇಶ್, ಹರೀಶ್ ಇಂಜಾಡಿ, ಮೋಹನ ಗೌಡ ಕೋಟಿಗೌಡನ ಮನೆ, ನಾರಾಯಣ ಅಗ್ರಹಾರ, ಜೇಸಿ ಅಧ್ಯಕ್ಷ ದೀಪಕ್ ನಂಬಿಯಾರ್ ಪಂಚಾಯತ್ ನ ಘನ ತ್ಯಾಜ್ಯ ಸಂಪನ್ಮೂಲ ಕೇಂದ್ರದ ತೇಜಕುಮಾರ್, ಶರತ್, ಪುನರ್ವಸತಿ ಕೇಂದ್ರದ ಅಶೋಕ್ ಮತ್ತಿತರರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.