ಜು.2 ರಂದು ಪಂಚಾಯತ್ ವತಿಯಿಂದ ಸೌಹಾರ್ದ ಸಭೆಯ ಆಯೋಜನೆ
ಅಮರಮುಡ್ನೂರು ಪಂಚಾಯತ್ ವ್ಯಾಪ್ತಿಯ ಕಣಿಪ್ಪಿಲ ಮಂಗಲ್ಪಾಡಿ ಮತ್ತು ಮೂಡೆಕಲ್ಲು ಭಾಗದಲ್ಲಿರುವ ಮೂಲಭೂತ ಸಮಸ್ಯೆ ಗಳ ಬೇಡಿಕೆಯಾಗಿರುವ ರಸ್ತೆ ಹಾಗೂ ವಿದ್ಯುತ್ ಟ್ರಾನ್ಸ್ ಫಾರ್ಮರ್, ಬಸ್ಸು ತಂಗುದಾಣ ನಿರ್ಮಾಣದ ಕುರಿತು ಬರಹವುಳ್ಳ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದ್ದು ಇದರ ಕುರಿತು ಚರ್ಚಿಸಿ ಪರಿಹಾರವನ್ನು ಒದಗಿಸುವ ಸಲುವಾಗಿ ಜು.2 ರಂದು ಅಮರಮುಡ್ನೂರು ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಸೌಹಾರ್ದ ಸಭೆ ನಡೆಸುವ ಕುರಿತು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.