ಮುಪ್ಪೇರ್ಯ ಗ್ರಾಮದಲ್ಲಿ ಕಾಲು ಮುರಿತಕ್ಕೊಳಗಾಗಿ ಅಸಹಾಯಕ ಸ್ಥಿತಿಯಲ್ಲಿರುವ ಮುಪ್ಪೇರ್ಯ ಅಕ್ಕಮ್ಮ ಎಂಬವರಿಗೆ ವಿದೇಶದಲ್ಲಿ ಉದ್ಯೋಗಿಯಾಗಿರುವ ರಾಜೇಂದ್ರ ಪ್ರಸಾದ್ ಖಂಡಿಗೆ ಎಂಬವರು ರೂ.5,000 ಧನ ಸಹಾಯ ನೀಡಿದ್ದಾರೆ.
ಅಕ್ಕಮ್ಮರವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆಂದು ಬಾಳಿಲ ಗ್ರಾಮ ಪಂಚಾಯತ್ ಸದಸ್ಯ ಹರ್ಷ ಜೆ .ಜೋಗಿಬೆಟ್ಟು ತಿಳಿಸಿದ್ದಾರೆ.