ಪೆರುವಾಜೆ ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ 7 ಮಂದಿ ವಿದ್ಯಾರ್ಥಿನಿಯರಿಗೆ ಅಭಿನಂದನಾ ಕಾರ್ಯಕ್ರಮವು ಜೂ.30 ರಂದು ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ಸನ್ಮಾನ ನೆರವೇರಿಸಿ, ಅಭಿನಂದನಾ ಮಾತನ್ನಾಡಿದರು.
ಗ್ರಾಮ ಪಂಚಾಯತ್ ಸದಸ್ಯ ರಾದ ಸಚಿನ್ ರಾಜ್ ಶೆಟ್ಟಿ ಹಾಗೂ ಪೆರುವಾಜೆ ಶಾಲೆ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್. ಶುಭ ಹಾರೈಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಅಲೆಕ್ಕಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.
ವಿದ್ಯಾರ್ಥಿನಿಯರಾದ ಪ್ರಜ್ಞಾ ಕೆ, ಸೌಪರ್ಣಿಕಾ ರೈ, ಪರೀಕ್ಷೀತಾ ಜೆ ಶೆಟ್ಟಿ, ಹಲಿಮತ್ ಹಫೀಪ, ಅರ್ಪಿತಾ ಎ,ನೇಸಿಮಾ ಪಿ,ಸದೀದಾ ಪಿ ಇವರಿಗೆ ಶಾಲು,ಸ್ಮರಣೀಕೆ,ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಪದ್ಮನಾಭ ಶೆಟ್ಟಿ, ಮಾಧವ ಮುಂಡಾಜೆ, ಶ್ರೀಮತಿ ರೇವತಿ, ಶ್ರೀಮತಿ ಶಹಿನಾಜ್ ಅಬ್ದುಲ್ ರಹೀಂ, ಶ್ರೀಮತಿ ಗುಲಾಬಿ ಪಂಚಾಯತ್ ಸಿಬ್ಬಂದಿ ಗಳಾದ ದಯಾನಂದ, ದಾಮೋದರ, ಶ್ರಿಮತಿ ಅಕ್ಷತಾ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಹರಿಣಾಕ್ಷಿ, ಪ್ರಶಾಂತ್ ಮೊಂತೆರೊ ಹಾಗೂ ಪೋಷಕರು, ಮುಕ್ಕೂರು ಶಾಲಾ ಮುಖ್ಯೋಪಾಧ್ಯಾಯರು,ಅಂಗನವಾಡಿ ಶಿಕ್ಷಕಿಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.