ದೇವರಕಾನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದತ್ತಿನಿಧಿ ಸ್ಥಾಪನೆ ಮತ್ತು ನೋಟ್ ಪುಸ್ತಕ ವಿತರಣೆಯು ನಡೆಯಿತು.
ದಿವಂಗತ ಕುಳ್ಳಂಪಾಡಿ ಚೆನ್ನಪ್ಪ ಗೌಡರ ಸ್ಮರಣಾರ್ಥ ಅವರ ಧರ್ಮಪತ್ನಿ ಸರೋಜಿನಿ ಕುಳ್ಳಂಪಾಡಿಯವರು ರೂ.25,000 ದತಿನಿಧಿ ಸ್ಥಾಪನೆ ಮಾಡಿದರು. ಪ್ರತಿ ವರ್ಷ 7 ನೇ ತರಗತಿ ವಿದ್ಯಾರ್ಥಿಗಳಿಗೆ ಈ ನಿಧಿಯ ಬಡ್ಡಿಯಿಂದ ಹಣ ಬಹುಮಾನವಾಗಿ ಸಿಗಲಿದೆ. ಹಾಗೆ ಮಾಲವಿಕ ವಿನೂಪ್ ಮಲ್ಲಾರ ಬರೆಮೇಲು ಈ ಶಾಲೆಯ ಹಿರಿಯ ವಿದ್ಯಾರ್ಥಿನಿ ದಂಪತಿಗಳು ಸುಮಾರು 5000 ಮೌಲ್ಯದ ನೋಟ್ ಬುಕ್ ಗಳನ್ನು ಎಲ್ಲಾ ಮಕ್ಕಳಿಗೂ ವಿತರಿಸಿದರು. ಬಳಿಕ ಎಸ್.ಡಿ.ಎಂ.ಸಿ. ಸಭೆ ನಡೆಯಿತು. ಪ್ರಾಯೋಜಕರುಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯ್ತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ನವೀನ್ ಕುಮಾರ್, ಉಪಾಧ್ಯಕ್ಷೆ ಮಮತಾ ಎಡಮಲೆ, ಪದನಿಮಿತ್ತ ಸದಸ್ಯರಾದ ಶಶಿಕಲಾ ಕುಳ್ಳಂಪಾಡಿ, ಮುಖ್ಯ ಶಿಕ್ಷಕಿ ಅನುರಾಧ, ಎಲ್ಲಾ ಶಿಕ್ಷಕರು, ದತಿನಿಧಿ ಸ್ಥಾಪಕರಾದ ಸರೋಜಿನಿ ಕುಳ್ಳಂಪಾಡಿ, ಮಾಲವಿಕ ವಿನೂಪ್ ಮಲ್ಲಾರ, ಎಸ್.ಡಿ.ಎಂ.ಸಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಅನುರಾಧ ಸ್ವಾಗತಿಸಿ ಶಿಕ್ಷಕಿ ಸೌಮ್ಯ ವಂದಿಸಿದರು.