ಯೋಜನೆಯ ಫಲಾನುಭವಿಗಳೊಂದಿಗೆ ಚರ್ಚೆ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಭೇಟಿ ನೀಡಿ ಸರ್ಪ ಸಂಸ್ಕಾರದ ಹೋಮದಲ್ಲಿ ಪಾಲ್ಗೊಂಡು ಸಂಕಲ್ಲ ಪೂರೈಸಿದರು.
ಆರಂಭದಲ್ಲಿ ಆಶ್ಲೇಷ ವಸತಿ ಗೃಹಕ್ಕೆ ಆಗಮಿಸಿದ ಅವರಿಗೆ ಪೊಲೀಸ್ ಇಲಾಖೆ ವತಿಯಿಂದ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ಸಚಿವ ಎಸ್ ಅಂಗಾರ, ಡಿ.ಸಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಹೂ ನೀಡಿ ಸ್ವಾಗತಿಸಿದರು. ಬಳಿಕ ದೇವಸ್ಥಾನಕ್ಕೆ ತೆರಳಿ ರಾಜ್ಯಪಾಲರು ಹೋರಾಂಗಣದಿಂದ ದೇವರ ದರ್ಶನ ಪಡೆದರು. ಸರ್ಪ ಸಂಸ್ಕಾರದಲ್ಲಿಗೆ ತೆರಳಿ ಹೋಮದಲ್ಲಿ ಪಾಲ್ಗೊಂಡು ಸಂಕಲ್ಪ ನೆರವೇರಿಸಿದರು. ತದನಂತರ ಆಶ್ಲೇಷ ವಸತಿಗೃಹಕ್ಕೆ ಬಂದು ಕೆಲ ಯೋಜನೆಗಳ ಫಲಾನುಭವಿಗಳೊಂದಿಗೆ ಚರ್ಚೆ ನೆರವೇರಿಸಿದರು. ಭವಾನಿ ಶಂಕರ ಪೂಂಬಾಡಿ ಅವರು ಕಿಶಾನ್ ಸಮ್ಮಾನ್ ಮತ್ತು ಫಸಲ್ ಭೀಮಾ ಯೋಜನೆಯ ಬಗ್ಗೆ, ಸುಜಾತಾ ಅವರು ಸಂಜೀವಿನಿ ಮತ್ತು ಅವರು ಉತ್ಪಾಧಿಸಿದ ಉತ್ಪನ್ನ ಬಗ್ಗೆ, ದುರ್ಗಾಪರಮೇಶ್ವರಿ ಪಿಂಚಣಿ ಬಗ್ಗೆ ಚರ್ಚಿಸಿದರು. ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ, ಸಂಜೀವಿನಿಯ ವೇದಾವತಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸಂಜೀವಿನಿಯವರು ತಯಾರಿಸಿದ ಮ್ಯಾಕ್ರಂ ವಯರ್ ನಿಂದ ತಯಾರಿಸಿದ ಗೂಡು ದೀಪವೊಂದನ್ನು ಉಚಿತವಾಗಿ ನೀಡಲಾಯಿತು. ಒಂದನ್ನು ರಾಜ್ಯಪಾಲರು ಹಣ ನೀಡಿ ಖರೀದಿಸಿದರು.
ನಾಳೆ ಬೆಳಗ್ಗೆ ಮತ್ತೆ ಸರ್ಪ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.