ಸಭೆಯಲ್ಲಿ ಅಭಿವೃದ್ಧಿ ಸಮಿತಿ ರಚಿಸಲು 7ಮಂದಿ ಸಂಚಾಲಕರ ಆಯ್ಕೆ
ಲಂಚ ಭ್ರಷ್ಟಾಚಾರ ಮುಕ್ತ ವಾರ್ಡ್ ಮತ್ತು ವಾರ್ಡಿನ ಅಭಿವೃದ್ಧಿಯ ಕುರಿತು ಸ್ಥಳೀಯ ಸಾರ್ವಜನಿಕರ ಪ್ರಥಮ ಹಂತದ ಸಭೆಯು ಜೂನ್ 30ರಂದು ಜಯನಗರ ಶಾಲಾ ರಜತ ಬಿಂದು ವೇದಿಕೆಯಲ್ಲಿ ನಡೆಯಿತು.
ಸಭೆಯಲ್ಲಿ ಅತಿ ಶೀಘ್ರವಾಗಿ ಪೂರ್ಣ ಪ್ರಮಾಣದಲ್ಲಿ ವಾರ್ಡ್ ಅಭಿವೃದ್ಧಿ ಸಮಿತಿಯನ್ನು ರಚಿಸುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯ ಆರಂಭದಲ್ಲಿ ವಾರ್ಡಿನ ಅಭಿವೃದ್ಧಿಯೊಂದಿಗೆ ಲಂಚ ಭ್ರಷ್ಟಾಚಾರ ಮುಕ್ತ ವಾರ್ಡ್ ಮಾಡುವ ಸುದ್ದಿ ಜನಾಂದೋಲನದ ಪರಿಕಲ್ಪನೆಯನ್ನು ಸುದ್ದಿಪತ್ರಿಕೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಳ್ ವಿವರಿಸಿದರು.
ಈ ಸಂಧರ್ಭ ಮುಂದಿನ ಸಭೆಗೆ ವಾರ್ಡಿನ ಪ್ರಮುಖರನ್ನು ಸೇರಿಸುವ ನಿಟ್ಟಿನಲ್ಲಿ
ರೋಹಿತ್ ಕೊಯಿಂಗೋಡಿ, ಮಹಮ್ಮದ್ ಮುಟ್ಟೆತೋಡಿ, ಲಾವಣ್ಯ ಜಯನಗರ, ಮುದ್ದಪ್ಪ,ಬಾಬು ಕುದುಪಾಜೆ, ಮೆರ್ಶಿನ್ ಕ್ರಾಸ್ತ, ನವೀನ್ ಮಚಾದೋ ಇವರ 7ಮಂದಿ ಸಂಚಾಲಕರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸ್ಥಳೀಯರಾದ ಗೀತಾ ರಾಮಣ್ಣ, ಗೀತಾ ಬಾಬು, ಲಲಿತ, ಸುದ್ದಿ ಪತ್ರಿಕೆಯ ಸಿಬ್ಬಂದಿಗಳಾದ ಜಯಶ್ರೀ ಕೊಯಿಂಗೋಡಿ,ಶರೀಫ್ ಜಟ್ಟಿಪಳ್ಳ, ಹಸೈನಾರ್ ಜಯನಗರ ಮೊದಲಾದವರು ಉಪಸ್ಥಿತರಿದ್ದರು.
ಹಸೈನಾರ್ ಜಯನಗರ ಸ್ವಾಗತಿಸಿ ವಂದಿಸಿದರು. ನವೀನ್ ಮಚಾದೋ ಸಹಕರಿಸಿದರು.