ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ ಲಾಲ್ ಹತ್ಯೆ ಖಂಡಿಸಿ ಪಂಜದಲ್ಲಿ ಜೂ.30 ರಂದು ಹಿಂದೂ ಜಾಗರಣ ವೇದಿಕೆ ಪಂಜ ಇದರ ವತಿಯಿಂದ ಪಂಜ ಪೇಟೆಯಲ್ಲಿ ಮೆರವಣಿಗೆ ನಡೆದು ಪ್ರತಿಭಟನಾ ಸಭೆ ಜರುಗಿತು.”ರಾಜಸ್ಥಾನದ ಉದಯಪುರದಲ್ಲಿ ಒಬ್ಬ ಬಡ ಬಟ್ಟೆ ಹೊಲಿಯುವ ಕನ್ಹಯ್ ಲಾಲ್ ಎಂಬ ಅಮಾಯಕನನ್ನು ಅತ್ಯಂತ ರಾಕ್ಷಸೀ ಪ್ರವೃತ್ತಿಯಿಂದ ಕೊಂದಿದ್ದಾರೆ. ಕೊಲೆ ಮಾಡಿದವರು ಕೇವಲ ಕೊಲೆ ಮಾಡಿ ಹೋಗುವ ಕೆಲಸ ಅವರದಲ್ಲ. ಒಟ್ಟು ಇಡೀ ಜಗತ್ತಿಗೆ , ವಿಶೇಷವಾಗಿ ಭಾರತವನ್ನು ಇಸ್ಲಾಮಿಕರಣಗೊಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಇಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿದೆ.
ಹಿಂದೂ ಸಮಾಜವನ್ನು ತುಳಿಯಲು ಮತಾಂಧರ ಶಕ್ತಿಗಳು ನಿರಂತರವಾಗಿ ಪ್ರಯತ್ನಿಸುತ್ತಿದೆ. ಸಾವಿರಾರು ತಾಲಿಬಾನಿಗಳು ನಮ್ಮ ಸುತ್ತಾ ಇದ್ದಾರೆ ಎಂಬುದನ್ನು ಮರೆಯಬೇಡಿ. ಈ ಬಗ್ಗೆ ಎಲ್ಲಾ ಹಿಂದುಗಳು ಎಚ್ಚೆತ್ತುಕೊಳ್ಳಬೇಕು. ವಿಶ್ವ ಶಾಂತಿಯನ್ನು ಹಿಂದೂ ಸಮಾಜ ಬಯಸುತ್ತದೆ.ಕಟುಕರಿಗೆ ಮತ್ತು ಪ್ರಕರಣ ಹಿಂದಿರುವರನ್ನು ಗಲ್ಲಿಗೇರಿಸ ಬೇಕು”ಎಂದು
ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಪರ್ಕ ಪ್ರಮುಖ್ ರವಿರಾಜ ಶೆಟ್ಟಿ ಕಡಬ ರವರು ದಿಕ್ಸೂಚಿ ಭಾಷಣ ಮಾಡಿದರು.
” ಈ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣ ಆಡಳಿತದಿಂದ ಹಿಂದೂ ಸಮಾಜಕ್ಕೆ ಬಹಳಷ್ಟು ಅನ್ಯಾಯ ಆಗಿವೆ. ಅದರ ಪರಿಣಾಮ ಈಗ ನಾವು ಎದುರಿಸುತ್ತಿದ್ದೇವೆ. ಸಮಾಜದಲ್ಲಿ ಎಲ್ಲರೂ ಸೌಹಾರ್ದದಿಂದ ಬಾಳುವ.ಇಲ್ಲವಾದರೆ ಕ್ರಿಯೆಗೆ ಪ್ರತಿಕ್ರಿಯೆ ನೀಡಬೇಕಾಗುತ್ತದೆ”.ಎಂದು ಅವರು ಹೇಳಿದರು.
ಹಿಂದೂ ಜಾಗರಣ ವೇದಿಕೆ ಸುಳ್ಯ ತಾಲೂಕು ಸಂಯೋಜಕ ಮಹೇಶ್ ಉಗ್ರಾಣಿ ಮನೆ, ಜಿಲ್ಲಾ ಸಹ ಸಂಯೋಜಕ ವೆಂಕಟ್ರಮಣ ಕುತ್ಯಾಡಿ ಕಡಬ,ಹಿಂದೂ ಜಾಗರಣ ವೇದಿಕೆ ಸದಸ್ಯರು, ಪಂಜ ಬಿ.ಎಂ. ಎಸ್ ಆಟೋ ಚಾಲಕರ ಸಂಘದ ಪದಾಧಿಕಾರಿಗಳು,ಸದಸ್ಯರು, ವರ್ತಕರು , ಊರವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರಕಾಶ್ ಜಾಕೆ ಪ್ರಾಸ್ತಾವನೆಗೈದು ಸ್ವಾಗತಿಸಿದರು.ಹಿಂದೂ ಜಾಗರಣ ವೇದಿಕೆಯ ಸುಳ್ಯ ತಾಲೂಕು ಸಹ ಸಂಯೋಜಕ ಕಿರಣ್ ನೆಕ್ಕಿಲ ವಂದಿಸಿದರು. ಪ್ರತಿಭಟನೆ ಸಭೆ ವೇಳೆ ಪಂಜ ಪೇಟೆಯಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.