Breaking News

ಮಧ್ಯರಾತ್ರಿಯ ಭೂಕಂಪನದ ಕೇಂದ್ರವೂ ಚೆಂಬು ಪ್ರದೇಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ರಿಕ್ಟರ್ ಮಾಪಕದಲ್ಲಿ 1.8 ಪರಿಮಾಣ ದಾಖಲು

ನಿನ್ನೆ ಮಧ್ಯರಾತ್ರಿ ಕೊಡಗು – ಸುಳ್ಯ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪನದ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 1.8 ದಾಖಲಾಗಿರುವುದಾಗಿ ತಿಳಿಸಿದೆ.

ಮಧ್ಯರಾತ್ರಿ ರಾತ್ರಿ 1 ಗಂಟೆ 15 ನಿಮಿಷಕ್ಕೆ 17 ಸೆಕೆಂಡುಗೆ ಈ ಭೂಕಂಪನ ಸಂಭವಿಸಿದ್ದು ಮಡಿಕೇರಿ – ದಕ್ಷಿಣ ಕನ್ನಡ ಗಡಿಗ್ರಾಮವಾಗಿರುವ ಚೆಂಬು ಹಾಗೂ ಪೆರಾಜೆಯಿಂದ 5.2 ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 5 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕ 1.8 ರಷ್ಟು ಭೂಕಂಪನವಾಗಿದೆ. ಇದರ ಪರಿಣಾಮ ಮಡಿಕೇರಿ ತಾಲೂಕಿನ ಕರಿಕೆ ಭಾಗದ ಉತ್ತರ ವಾಯುವ್ಯ ದಿಕ್ಕಿನಲ್ಲಿ 9.4 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾಜೆ ಭಾಗದ ಪಶ್ಚಿಮದಲ್ಲಿ 11.5 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಗ್ನೇಯದಲ್ಲಿ 11 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಪ್ರದೇಶದ 20-30 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
ಹೀಗಾಗಿ ಕೊಡಗು ಗಡಿ ಪ್ರದೇಶಕ್ಕೆ ಹತ್ತಿರದಲ್ಲಿರುವ ಸುಳ್ಯ ತಾಲೂಕಿನ ಪ್ರದೇಶಗಳಲ್ಲಿ ಮಾತ್ರ ಭೂಮಿ ಕಂಪಿಸಿರುವ ಅನುಭವ ಆಗಿರುವುದಾಗಿ ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.