ಆಲೆಟ್ಟಿ ಗ್ರಾಮದ ಮೈಂದೂರು ವಿಶ್ವನಾಥ ಗೌಡ ಎಂಬವರ ಕೃಷಿ ತೋಟಕ್ಕೆ ನಿನ್ನೆ ತಡ ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ಕೃಷಿ ಬೆಳೆಯನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.
ಸುಮಾರು 75 ತೆಂಗಿನ ಮರ,50 ಬಾಳೆಗಿಡ,10 ಅಡಿಕೆ ಮರ ಗಳನ್ನು ನಾಶ ಪಡಿಸಿರುವುದಲ್ಲದೆ ತೋಟಕ್ಕೆ ಅಳವಡಿಸಿದ ನೀರಿನ ಪೈಪನ್ನು ಪುಡಿಗಟ್ಟಿ ಲಕ್ಷಾಂತರ ರೂ ನಷ್ಟ ಉಂಟಾಗಿದೆ.