ಸುಳ್ಯ ಪೋಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದ ಚಾಮಯ್ಯ ಗೌಡ ಅಡ್ಪಂಗಾಯರು ಜೂ.೩೦ರಂದು ಸೇವಾ ನಿವೃತ್ತರಾಗಿದ್ದಾರೆ.
೧೯೯೩ರಲ್ಲಿ ಪೋಲೀಸ್ ತರಬೇತಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಚಾಮಯ್ಯರು ಸುರತ್ಕಲ್ ಪೋಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿ ಸರಕಾರಿ ಸೇವೆ ಆರಂಭಿಸಿದರು. ಆ ಬಳಿಕ ಉಡುಪಿ, ಪುತ್ತೂರು ನಗರ, ವಿಟ್ಲ ದಲ್ಲಿ ಸೇವೆ ಸಲ್ಲಿಸಿದರು. ೨೦೧೫ರಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಪದೋನ್ನತಿಗೊಂಡ ಅವರು ಸುಳ್ಯ ಪೋಲೀಸ್ ಠಾಣೆಗೆ ವರ್ಗಾವಣೆಗೊಂಡರು. ಸುಮಾರು ೨೯ ವರ್ಷಗಳ ಸೇವೆಯ ಬಳಿಕ ಅವರು ಜೂ.೩೦ರಂದು ನಿವೃತ್ತರಾಗಿದ್ದಾರೆ.
ಪೋಲೀಸ್ ಇಲಾಖೆಗೆ ಸೇರುವ ಮೊದಲು ಚಾಮಯ್ಯರು ಬೆಳ್ಳಾರೆ ಜೂನಿಯರ್ ಕಾಲೇಜು, ಮಡಪ್ಪಾಡಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.
ಚಾಮಯ್ಯರ ಪತ್ನಿ ಲಲಿತಾಲಕ್ಷ್ಮಿ ಗೃಹಿಣಿಯಾಗಿದ್ದಾರೆ. ಪುತ್ರ ನಿಶ್ಚಿತ್ ಅಡ್ಪಂಗಾಯ ದಾರಾವಾಡದಲ್ಲಿ ಐಎಎಸ್ ತರಬೇತಿ ಪಡೆಯುತ್ತಿದ್ದಾರೆ. ಕಿರಿಯ ಪುತ್ರ ಗೌತಮ್ ಸುಳ್ಯ ಎನ್ನೆಂಸಿಯಲ್ಲಿ ಬಿಬಿಎ ಓದುತ್ತಿದ್ದಾರೆ.