ಜು.9 ರಂದು ನಿಂತಿಕಲ್ಲಿನಲ್ಲಿ ಕಾಂಗ್ರೆಸ್ ನಿಂದ ‘ನಾ… ನಾಯಕಿ…’ ಮಹಿಳಾ ಸಮಾವೇಶ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿ., ಮಾಜಿ ಸಿ.ಎಂ. ಸಿದ್ದರಾಮಯ್ಯ ಆಗಮನ

ಕಾಂಗ್ರೆಸ್ ಪಕ್ಷದಡಿಯಲ್ಲಿ ವಿವಿಧ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಹಾಗೂ ಪರಾಭವಗೊಂಡು ತೆರೆಯ ಅಂಚಿನಲ್ಲಿರುವ ಮಹಿಳೆಯರನ್ನು ಮತ್ತೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮೈಸೂರು ವಿಭಾಗ ಮಟ್ಟದ ನಾ.. ನಾಯಕಿ ಮಹಿಳಾ ಸಮಾವೇಶ ಜು.9 ರಂದು ಸುಳ್ಯ ತಾಲೂಕಿನ ನಿಂತಿಕಲ್ಲಿನ ಧರ್ಮಶ್ರೀ ಆರ್ಕೆಡ್ ನಲ್ಲಿ ನಡೆಯಲಿದೆ ಎಂದು ಸುಳ್ಯ‌ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ಮಾಹಿತಿ ನೀಡಿದರು.

 

ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಕುರಿತು ಮಾಹಿತಿ ನೀಡಿದರು.

“ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ ಪಕ್ಷ ಕಾಂಗ್ರೆಸ್. ಸ್ತ್ರೀಶಕ್ತಿ ಸಂಘವನ್ನು ಹುಟ್ಟು ಹಾಕಿದ್ದು ಕೂಡಾ ಕಾಂಗ್ರೆಸ್ ಪಕ್ಷ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಕೂಡ ಸಮಾನಾಂತರ ಸ್ಥಾನಮಾನದ ಕಲ್ಪನೆ ರಾಜೀವ ಗಾಂಧಿಯವರದ್ದು ಹೀಗೆ ಹಲವು ಕಾರ್ಯಕ್ರಮ ಮಹಿಳೆಯರಿಗಾಗಿ ತರಲಾಗಿದೆ. ಇದೀಷ್ಟೆ ಅಲ್ಲದೇ ಕಾಂಗ್ರೆಸ್ ಪಕ್ಷದಡಿಯಲ್ಲಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಹಾಗೂ ಫರಾಭವಗೊಂಡ ಅದೆಷ್ಟೋ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿ ಯಲ್ಲಿ ಇಲ್ಲ. ಅವರೆಲ್ಲರೂ ಮತ್ತೆ ಸಮಾಜದ ಮುಖ್ಯವಾಹಿನಿಗೆ ಬಂದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿಯೊಬ್ಬರೂ ನಾಯಕಿಯರೇ ಎನ್ನುವುದು ಸಮಾವೇಶದ ಉದ್ದೇಶ. ಈ ನಿಟ್ಟಿನಲ್ಲಿ ಅವರೆಲ್ಲರನ್ನು ಒಂದು ಗೂಡಿಸುವ ಕಾರ್ಯಕ್ರಮ ಇದು ಸಮಾವೇಶಕ್ಕಿಂತಲೂ ಹೆಚ್ಚಾಗಿ ಒಂದು ದಿನದ ಶಿಬಿರ ಇದಾಗಿದೆ ಎಂದು ಅವರು ಹೇಳಿದರು.

ಡಿ.ಕೆ.ಶಿ., ಸಿದ್ದರಾಮಯ್ಯ ಆಗಮನದ ನಿರೀಕ್ಷೆ : ನಾ.. ನಾಯಕಿ ಕಾರ್ಯಕ್ರಮ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ರ ಕನಸು. ಅವರು ಈ ಕಾರ್ಯಕ್ರಮ ಕ್ಕೆ ಬರುವ ಸಾಧ್ಯತೆ ಇದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರೂ ಕೂಡಾ ಆಗಮಿಸುವ ಸಾಧ್ಯತೆ ಇದೆ. ಅವರು ಬಾರದಿದ್ದರೂ ಝೂಂ ಆಪ್ ಮೂಲಕ ಭಾಗವಹಿಸುವರು ಎಂದು ವಿವರ ನೀಡಿದರು.
ರಾಜ್ಯ‌ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ನಾ… ನಾಯಕಿ ಕಾರ್ಯಕ್ರಮ ದ ರಾಜ್ಯ ಸಂಚಾಲಕಿ ಉಮಾಶ್ರೀ, ಕಾಂಗ್ರೆಸ್ ನಾಯಕಿ ಮೋಟಮ್ಮ ಸಹಿತ ಹಲವು ಮಂದಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ರಾಜೀವಿ ಆರ್ ರೈ, ಲೀಲಾ ಮನಮೋಹನ್, ಎಂ.ವೆಂಕಪ್ಪ ಗೌಡ, ತಿರುಮಲೇಶ್ವರಿ ಜಾಲ್ಸೂರು, ಜೂಲಿಯಾನ ಕ್ರಾಸ್ತ, ಪಿ.ಎಸ್.ಗಂಗಾಧರ್, ಅನಿಲ್ ರೈ ಪುಡ್ಕಜೆ, ನಂದರಾಜ ಸಂಕೇಶ, ಸತ್ಯಕುಮಾರ್ ಆಡಿಂಜ, ಭವಾನಿಶಂಕರ್ ಕಲ್ಮಡ್ಕ, ಡೇವಿಡ್ ಧೀರಾ ಕ್ರಾಸ್ತ ಇದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.