ಸುಳ್ಯ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರತಿನಿಧಿಗಳ ಆಯ್ಕೆಗೆ ಜು.೩ರಂದು ಸುಳ್ಯದ ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಸುಳ್ಯ ತಾಲೂಕಿನಿಂದ ನಾಲ್ಕು ಮಂದಿ ಪ್ರತಿನಿಧಿಗಳ ಆಯ್ಕೆ ನಡೆಯಬೇಕಾಗಿದ್ದು ಏಳು ಮಂದಿ ಶಿಕ್ಷಕರು ಕಣದಲ್ಲಿದ್ದಾರೆ.
ಸ್ಪರ್ಧಾ ಕಣದಲ್ಲಿ ಅರಂತೋಡು ಎನ್ನೆಂಪಿಯುಸಿ ಪ್ರೌಢಶಾಲಾ ವಿಭಾಗದ ಶಿಕ್ಷಕ ಕಿಶೋರ್ ಕುಮಾರ್ ಕೆ, ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ ಉದಯಕುಮಾರ್ ರೈ, ಮರ್ಕಂಜ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಪ್ರವಿಣ ಕುಮಾರಿ ಇ., ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ ನಾರಾಯಣ ಬಿ., ಸುಳ್ಯ ಗಾಂಧಿನಗರ ಕೆ.ಪಿ.ಎಸ್. ಶಿಕ್ಷಕ ಚಿನ್ನಪ್ಪ ಗೌಡ ಪತ್ತುಕುಂಜ, ಪಂಜ ಪ.ಪೂ. ಕಾಲೇಜಿನ ಪುರಂದರ ಕೆ, ಸುಳ್ಯ ಪ.ಪೂ. ಕಾಲೇಜಿನ ಶಿಕ್ಷಕ ಚಂದ್ರಶೇಖರ್ ಕೆ.ಎಸ್. ಸ್ಪರ್ಧಾ ಕಣದಲ್ಲಿದ್ದಾರೆ.
ಬೆಳಗ್ಗೆ ೯ ಗಮಟೆಯಿಂದ ಸಂಜೆ ೪ ಗಂಟೆ ವರೆಗೆ ಚುನಾವಣೆ ನಡೆಯಲಿದ್ದು, ಪ್ರೌಢಶಾಲೆಗಳ ೧೧೨ ಮಂದಿ ಶಿಕ್ಷಕರು ಮತದಾನ ಮಾಡಲು ಅರ್ಹರಾಗಿರುತ್ತಾರೆ.