Breaking News

ಬಾಳಿಲ : ವಿದ್ಯಾರ್ಥಿ ಸರಕಾರ ಪದಗ್ರಹಣ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಬಾಳಿಲ  ವಿದ್ಯಾಬೋಧಿನೀ ಪ್ರೌಢಶಾಲೆ ಬಾಳಿಲದಲ್ಲಿ ೨೦೨೨-೨೩ನೆಯ ಶೈಕ್ಷಣಿಕ ವರುಷದ ವಿದ್ಯಾರ್ಥಿ ಸರಕಾರದ ಪದಗ್ರಹಣ ಸಮಾರಂಭವು ನಡೆಯಿತು. ವಿದ್ಯಾರ್ಥಿ ಸರಕಾರದ ರಾಜ್ಯಪಾಲರಾದ ಶಾಲೆಯ ಮುಖ್ಯೋಪಾಧ್ಯಾಯರು ಸಮಾರಂಭದಲ್ಲಿ ಭಾಗವಹಿಸಿ,ಸಭಾಪತಿ,ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಮತ್ತು ಸಂಪುಟ ದರ್ಜೆ ಸಚಿವರಿಗೆ ಶಾಲಾ ಸಂವಿಧಾನದಂತೆ ಸಂಸ್ಕೃತ,ಕನ್ನಡ,ಇಂಗ್ಲಿಷ್ ,ಹಿಂದಿ ಮತ್ತು ತುಳು ಭಾಷೆಗಳಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜ್ಯಪಾಲರ ನೆಲೆಯಿಂದ ಮುಖೋಪಾಧ್ಯಾಯರಾದ ಶ್ರೀ ಯಶೋಧರ ಎನ್ ಮಾತನಾಡುತ್ತಾ ಶಾಲಾ ಸಂವಿಧಾನದ ರಕ್ಷಣೆ ವಿದ್ಯಾರ್ಥಿ ಸರಕಾರದ ಕರ್ತವ್ಯ, ಶಾಲೆಯ ವ್ಯವಸ್ಥೆ ಮತ್ತು ಜವಾಬ್ದಾರಿಯುತ ವಿದ್ಯಾರ್ಥಿಯಾಗಿ ಪ್ರತಯೊಬ್ಬರು ಶಾಲಾ ನಿಯಮದಂತೆ ಅಗತ್ಯತೆಯನ್ನು ವಿವರಿಸಿದರು.ಸಭಾಪತಿ ದೀಕ್ಷಾ ರೈ ಇವರು ವಿಪಕ್ಷ ನಾಯಕಿ ಮತ್ತು ಇತರ ಸದಸ್ಯರಿಗೆ ವಿವಿಧ ಭಾಷೆಗಳಲ್ಲಿ ಪ್ರತಿಜ್ಞೆಯನ್ನು ಬೋಧಿಸಿದರು. ಮುಖ್ಯಮಂತ್ರಿಯಾದ ಜನಕ ಕೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯವನ್ನು ಮಂಡಿಸಿದರು.ವಿಪಕ್ಷ ನಾಯಕಿ ಪಲ್ಲವಿ ಕೆ ಎಸ್ ವಂದನಾ ನಿರ್ಣಯವನ್ನು ಅನುಮೋದಿಸಿದರು.ಮುಖ್ಯಮಂತ್ರಿಯವರು ವಿವಿಧ ಖಾತೆಗಳನ್ನು ಆಢಳಿತ ಪಕ್ಷದ ಸದಸ್ಯರಿಗೆ ಹಂಚಿಕೆ ಮಾಡಿ ಸದನವನ್ನು ಉದ್ದೇಶಿಸಿ ಮಾತನಾಡಿದರು.ವಿಪಕ್ಷ ನಾಯಕಿ ಸರಕಾರದ ಕಾರ್ಯಕಲಾಪಗಳಿಗೆ ಪೂರ್ಣಪ್ರಮಾಣದ ಬೆಂಬಲವನ್ನು ತನ್ನ ಭಾಷಣದಲ್ಲಿ ಘೋಷಿಸಿದರು.ಸಭಾಪತಿಗಳು ಕಲಾಪವನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದರು ಶಾಲೆಯ.ಎಲ್ಲಾ ಸಿಬ್ಬಂದಿಗಳು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.