ಅಜ್ಜಾವರ ಗ್ರಾಮದ ಮುಳ್ಯ ನಿವಾಸಿ ನಿವೃತ್ತ ಸೈನಿಕ ಪಲ್ಲತಡ್ಕ ಬಾಲಕೃಷ್ಣ ಗೌಡ ಸಿ.ಹೆಚ್.ರವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಜು.1 ರಂದು ನಿಧನರಾದರು.
ಮೃತರು ಪತ್ನಿ ಹರ್ಷಾವತಿ , ಪುತ್ರ ಮನೋಜ್ ಕುಮಾರ್, ಪುತ್ರಿಯರಾದ ಕಲ್ಪನಾ, ಹವ್ಯಶ್ರೀ, ಅಳಿಯ ನ್ಯಾಯವಾದಿ ಸತೀಶ್ ಕುಂಭಕ್ಕೋಡು ಮತ್ತು ಮೊಮ್ಮಗ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರು ಸುಮಾರು 17 ವರ್ಷಗಳ ಭೂ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು.ಆರ್ಮಿಯಿಂದ ನಿವೃತ್ತಿ ಹೊಂದಿದ ನಂತರ 24 ವರ್ಷಗಳ ಕಾಲ ಬಂಟ್ವಾಳದ ದೂರದರ್ಶನ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು.