Breaking News

ಐವರ್ನಾಡಿನಲ್ಲಿ ವಿದ್ಯುತ್ ಶಾಕ್ ನಿಂದ ಮೃತಪಟ್ಟ ಬಾಲಕ ಮಹಮ್ಮದ್ ಆದಿಲ್

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಜ್ಜನ ಮನೆಗೆ ಬಂದಿದ್ದಾಗ ಫ್ರಿಡ್ಜ್ ನಲ್ಲಿ ವಿದ್ಯುತ್ ಆಘಾತ ಸಂಭವಿಸಿ ಮೃತ್ಯು

ಮನೆಯಲ್ಲಿನ ಫ್ರಿಡ್ಜ್ ನಿಂದ ಶಾಕ್ ಹೊಡೆದು 6 ವರ್ಷದ ಬಾಲಕ ಮೃತಪಟ್ಟ ಘಟನೆಯ ಇನ್ನಷ್ಟು ಮಾಹಿತಿ ಲಭ್ಯವಾಗಿದೆ.

 

ಐವರ್ನಾಡಿನ ಕೈವಲ್ತಡ್ಕ ಆದಂ ಎಂಬವರ ಪುತ್ರಿ ಅಪ್ಸ ಹಾಗೂ ಹೈದರಾಲಿ ರವರ ಪುತ್ರ ಆದಿಲ್ ಮೃತಪಟ್ಟ ಬಾಲಕ.

ಮೂಲತ ಪುತ್ತೂರು ತಾಲೂಕಿನ ಕುಂಬ್ರ ದಲ್ಲಿ ತನ್ನ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದ ಆದಿಲ್ ಐವರ್ನಾಡಿನ ತನ್ನ ಅಜ್ಜನ ಮನೆಗೆ ಬಂದಿದ್ದ.

ಬಾಲಕನ ಸಹೋದರ ಅಫ್ರಾಜ್ ಐವರ್ನಾಡಿನಲ್ಲಿ ತನ್ನ ಅಜ್ಜನ ಮನೆಯಲ್ಲಿ ಇದ್ದು ಸರ್ಕಾರಿ ಶಾಲೆಯಲ್ಲಿ ಎರಡನೆಯ ತರಗತಿ ವಿದ್ಯಾರ್ಥಿಯಾಗಿದ್ದ. ಈ ಕಾರಣದಿಂದ ಆದಿಲ್ ತಂದೆ ತಾಯಿ ಯೊಂದಿಗೆ ಆಗಾಗ ಐವರ್ನಾಡಿಗೆ ಬರುತ್ತಿದ್ದ.

ಅಪರಾಹ್ಮ ಎರಡು ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು ಶಾಕ್ ನಿಂದ ಗಂಭೀರವಾಗಿದ್ದ ಆದಿಲ್ ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಪ್ರಾಣ ಕಳೆದುಕೊಂಡಿದ್ದ.

ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.