Breaking News

ಅಪಘಾತದಲ್ಲಿ ಗಾಯಗೊಂಡಿದ್ದ ಬೆಟ್ಟಂಪಾಡಿಯ ಮಹಿಳೆ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಜೂ. 27 ರಂದು ಓಡಬಾಯಿಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಸುಳ್ಯ ಬೆಟ್ಟಂಪಾಡಿಯ ಮಹಿಳೆ ಇಂದು ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಸುಳ್ಯದ ಬೆಟ್ಟಂಪಾಡಿ ನಿವಾಸಿ ಕೆವಿಜಿ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ಸ್ವೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಮತಿ ದುಗ್ಗಮ್ಮ ( 68 ) ರವರು ಜೂ.27 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಓಡಬಾಯಿಯಲ್ಲಿ ದ್ವಿಚಕ್ರ ವಾಹನ ಗುದ್ದಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ತೀವ್ರ ತರದ ಜಖಂ ಆಗಿದ್ದುದರಿಂದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಂದು ಸಂಜೆ ಅವರು ಕೊನೆಯುಸಿರೆಳೆದಿದ್ದಾರೆ.
ಅಟ್ಲೂರಿನಲ್ಲಿದ್ದ ಮನೆಯನ್ನು ಮಾರಾಟ ಮಾಡಿದ ಬಳಿಕ ಅವರು, ಬೆಟ್ಟಂಪಾಡಿಯಲ್ಲಿರುವ ಮೊಮ್ಮಗ ಉದಯರವರ ಮನೆಯಲ್ಲಿ ಪತಿಯೊಂದಿಗೆ ವಾಸಿಸುತ್ತಿದ್ದರು. ದುಗ್ಗಮ್ಮರವರು ಪತಿ ಕರಿಯಪ್ಪ ಮಣಿಯಾಣಿ, ಪುತ್ರ ಗೋಪಾಲ, ಪುತ್ರಿ ಕುಸುಮ, ಮೊಮ್ಮಗ ಉದಯ ಮತ್ತು ಮನೆ ಅವರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.