Breaking News

ಸುಳ್ಯ ಕ.ಸಾ.ಪ.ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡ ವಿಷಯದಲ್ಲಿ ಶೇ. 100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 


ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯ ತಾಲೂಕು ಘಟಕದ ವತಿಯಿಂದ 2021- 22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ. 100 ಅಂಕ ಪಡೆದ ಸುಳ್ಯ ತಾಲೂಕಿನ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಜೂ.2 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕರಾದ ಸಹಕಾರಿ ರತ್ನ ಸೀತಾರಾಮ ರೈ ಸವಣೂರು ನೆರವೇರಿಸಿದರು. ವಿದ್ಯಾರ್ಥಿಗಳಿಗೆ ಗೌರವಾರ್ಪಣೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ ನೆರವೇರಿಸಿದರು. ಅಧ್ಯಕ್ಷತೆಯನ್ನು ಕ.ಸಾ.ಪ.ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ವಹಿಸಿದ್ದರು. ಕ.ಸಾ.ಪ. ನಿಕಟ ಪೂರ್ವಾಧ್ಯಕ್ಷರಾದ ಡಾ.ಹರಪ್ರಸಾದ್ ತುದಿಯಡ್ಕ,ಕ.ಸಾ.ಪ. ಪೂರ್ವಾಧ್ಯಕ್ಷೆ, ನಿವೃತ್ತ ಬಿ.ಡಿ.ಒ.ಶ್ರೀಮತಿ ಮೀನಾಕ್ಷಿ ಗೌಡ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕ.ಸಾ‌.ಪ.ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಕ.ಸಾ.ಪ.ತಾಲೂಕು ಗೌರವ ಸಲಹೆಗಾರರಾದ ಶ್ರೀಮತಿ ಲೀಲಾ ದಾಮೋದರ್, ಕಾರ್ಯಕ್ರಮ ನಿರ್ದೇಶಕರಾದ ಸಂಕೀರ್ಣ ಚೊಕ್ಕಾಡಿ, ಗೌರವ ಕಾರ್ಯದರ್ಶಿಗಳಾದ ಶ್ರೀಮತಿ ಚಂದ್ರಮತಿ ಮತ್ತು ತೇಜಸ್ವಿ ಕಡಪಳ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೇಜಸ್ವಿ ಕಡಪಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು. ಶಿಕ್ಷಕಿ ಶ್ರೀಮತಿ ಮಮತಾ ಮೂಡಿತ್ತಾಯ, ವಿದ್ಯಾರ್ಥಿ ಪರವಾಗಿ ಪವನ್ ಎಣ್ಮೂರು ಮಾತನಾಡಿದರು. ಕ.ಸಾ.ಪ.ನಿರ್ದೇಶಕಿ ಸಾವಿತ್ರಿ ಕಣೆಮರಡ್ಕ ವಂದಿಸಿದರು. ನಿರ್ದೇಶಕಿ ಲತಾ ಸುಪ್ರೀತ್ ಮೋಂಟಡ್ಕ ವಂದಿಸಿದರು.

*ಕನ್ನಡಿಗರು ಪ್ರಪಂಚದಾದ್ಯಂತ ಮಾಡುವ ಒಳ್ಳೆಯ ಕೆಲಸ ನೋಡುವಾಗ ಮನಸ್ಸು ತುಂಬಿ ಬರುತ್ತದೆ* – ಸೀತಾರಾಮ ರೈ ಸವಣೂರು

*ಕನ್ನಡದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು ಸುಳ್ಯಕ್ಕೆ ಹೆಮ್ಮೆ. ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದಾಗ ಉತ್ತಮ ಗುರಿಸಾಧನೆ ಸಾಧ್ಯ* ಡಾ. ಕೆ.ವಿ.ಚಿದಾನಂದ

*ಕನ್ನಡದಲ್ಲಿ 100 ಅಂಕ ಪಡೆದ ಸುಮಾರು 80 ವಿದ್ಯಾರ್ಥಿಗಳಿಗೆ ಕನ್ನಡ ಶಾಲು,ಸ್ಮರಣಿಕೆ,ಪುಸ್ತಕ ನೀಡಿ ಗೌರವಿಸಲಾಯಿತು.*

*ಕಾರ್ಯಕ್ರಮದಲ್ಲಿ ಸವಣೂರು ಸೀತಾರಾಮ ರೈ ಮತ್ತು ಡಾ.ಕೆ.ವಿ.ಚಿದಾನಂದರನ್ನು ಕ.ಸಾ.ಪ.ವತಿಯಿಂದ ಸನ್ಮಾನಿಸಲಾಯಿತು.*

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.