Breaking News

ಕೆ.ವಿ.ಜಿ. ಕೈಗಾರಿಕಾ ತರಬೇತಿ ಎಂ.ಎಂ.ವಿ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಮಹೇಶ್ ನಿಡ್ಯಮಲೆ ವಯೋನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆ.ವಿ.ಜಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಳೆದ ೩೫ ವರ್ಷಗಳಿಂದ ಮೋಟಾರ್ ವೆಹಿಕಲ್ ಮೆಕಾನಿಕ್ ವಿಭಾಗದಲ್ಲಿ ಕಿರಿಯ ತರಬೇತಿ ಅಧಿಕಾರಿಯಾಗಿ ಸೆವೆ ಸಲ್ಲಿಸಿ ಜೂ.೩೦ ರಂದು ವಯೋ ನಿವೃತ್ತಿ ಹೊಂದಿರುತ್ತಾರೆ.

 

 

ಈ ಸಂದರ್ಭದಲ್ಲಿ ಅವರನ್ನು ಅಕಾಡೆಮಿ ಅಫ್ ಲಿಬರಲ್ ಎಜ್ಯುಕೇಶನ್ ಇದರ ಪ್ರಧಾನ ಕಾರ್ಯದರ್ಶಿಯಾದ ಡಾ.ರೇಣುಕಾಪ್ರಸಾದ್ ರವರು ಶಾಲು ಹೊದಿಸಿ, ಹಾರ ಹಾಕಿ ಅವರ ಕೊನೆಯ ದಿನದ ಸೇವೆಗೆ ಶುಭಹಾರೈಸಿದರು. ನಿವೃತ್ತ ಜೀವನವನ್ನು ಸುಖವಾಗಿ ಕಳೆಯಿರಿ. ಏಕೆಂದರೆ ನಮ್ಮ ತಂದೆಯವರಾದ ಕೆ.ವಿ.ಜಿ.ಯವರ ಕಾಲದಿಂದಲೂ ಇಲ್ಲಿ ಸೇವೆ ಸಲ್ಲಿಸಿರುವುದು ನಮ್ಮ ಮನಸ್ಸಿನಲ್ಲಿ ಇದೆ ಎಂದು ಶುಭಹಾರೈಸಿದರು.

ಅದೇ ದಿನ ಕೆ.ವಿ.ಜಿ ಐ.ಟಿ.ಐನ ಪ್ರಾಂಶುಪಾಲರು ತರಬೇತಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿ ಸರಳ ಸಮಾರಂಭ ಮಾಡಿ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಕೊನೆಯ ದಿನದವರೆಗಿನ ಸೇವೆಯನ್ನು ಪ್ರಶಂಸಿಸಿ ಶುಭಹಾರೈಸಿದರು. ಪ್ರಾಂಶುಪಾಲರಾದ  ಚಿದಾನಂದ ಗೌಡ ಬಾಳಿಲ  ಸ್ವಾಗತಿಸಿ,  ಮಹೇಶ್‌ರವರು ತರಬೇತಿ ನೀಡಿದ ಸಾವಿರಾರು ವಿದ್ಯಾರ್ಥಿಗಳು ಇವತ್ತು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ತನ್ನ ಬದುಕನ್ನು ಕಟ್ಟಿಕೊಂಡಿರುತ್ತಾರೆ. ಪಠ್ಯ ವಿಚಾರದಲ್ಲಿ ಬಹಳ ಪ್ರಭಾವಶಾಲಿಯಾಗಿ ಸೇವೆ ಸಲ್ಲಿಸಿದ್ದರು ಎಂಬುದಾಗಿ ನೆನಪಿಸಿಕೊಂಡರು, ಅದೇ ರೀತಿ ತರಬೇತಿ ಅಧಿಕಾರಿ  ದಿನೇಶ್ ಮಡ್ತಿಲರವರು ಮಾತನಾಡಿ, ಅರಂಭದ ಅವರ ದಿನಗಳನ್ನು ನೆನಪಿಸಿಕೊಂಡ ಸರಕಾರದ ಅನುದಾನಕ್ಕೆ ಒಳಪಡುವ ಮೊದಲು ಕನಿಷ್ಠ ವೇತನದಲ್ಲಿ ನಾವು ತುಂಬಾ ವ್ಯವಹಾರ ಮಾಡಿದ್ದೇವೆ. ಈಗ ಸಾಕಾಗುವಷ್ಟು ವೇತನ ಸಿಕ್ಕಿ ನಮ್ಮ ನಮ್ಮ ಬೇಕು ಬೇಡಗಳನ್ನು ಪುರೈಸಿಕೊಳ್ಳುವಲ್ಲಿ ತೃಪ್ತಿಯ ಜೀವನ ನಡೆಸುವಲ್ಲಿ ಅನುಕೂಲವಾಗಿದೆ. ಇದಕ್ಕೆಲ್ಲ ಪೂಜ್ಯ ಕೆ.ವಿ.ಜಿಯವರ ಆರ್ಶಿವಾದವೇ ಕಾರಣ ಎಂದು ತಿಳಸಿದರು.

ಭವಾನಿಶಂಕರ್ ಅಡ್ತಲೆ ವಂದಿಸಿದರು. ಕಿರಿಯ ತರಬೇತಿ ಅಧಿಕಾರಿ ಪ್ರವೀಣ್‌ಕುಮಾರ್.ಕೆ ಕಾರ್ಯಕ್ರಮ  ನಿರ್ವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.