ಹಲವಾರು ಸಾಮಾಜಿಕ ಸೇವೆಗಳ ಮೂಲಕ ಸಕ್ರೀಯವಾಗಿರುವ ಗೂನಡ್ಕದ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ನ 11 ನೇ ವಾರ್ಷಿಕ ಮಹಾಸಭೆಯು ಗೂನಡ್ಕದ ಹಯಾತುಲ್ ಇಸ್ಲಾಂ ಮದ್ರಸದಲ್ಲಿ ಜರುಗಿತು. ಅಸೋಸಿಯೇಶನ್ ನ ನೂತನ ಅಧ್ಯಕ್ಷರಾಗಿ ಯುವ ಉದ್ಯಮಿ ಜಾಫರ್ ಸಾದಿಕ್ ಕುಂಭಕ್ಕೋಡ್ ಗೂನಡ್ಕರವರು ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಯು.ಸೂಫಿ ದರ್ಖಾಸ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಟಿ.ಹಸೈನಾರ್ ದೊಡ್ಡಡ್ಕ, ಕಾರ್ಯದರ್ಶಿಯಾಗಿ ಜಿ.ಎಂ.ಅಬ್ದುಲ್ಲ, ಖಜಾಂಜಿಯಾಗಿ ಡಿ.ಎಂ.ಅಬ್ದುಲ್ಲ ಪೆಲ್ತಡ್ಕ, ನಿರ್ದೇಶಕರುಗಳಾಗಿ ಟಿ.ಬಿ.ಅಝೀಝ್ ದರ್ಖಾಸ್, ಮಹಮ್ಮದ್ ಪೆಲ್ತಡ್ಕ ಹಾಗೂ ಮುಜೀಬ್ ದರ್ಖಾಸ್ ಆಯ್ಕೆಗೊಂಡಿದ್ದಾರೆ.
ಕಳೆದ 11 ವರ್ಷಗಳಿಂದ ಅಲ್–ಅಮೀನ್ ವೆಲ್ಫೇರ್ ಅಸೋಸಿಯೇಶನ್ ಅನ್ನು ಸಮರ್ಥವಾಗಿ ಮುನ್ನಡೆಸಿದ ಮಹಮ್ಮದ್ ಕುಂಞ ಗೂನಡ್ಕರವರು ಗೌರವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಸಲಹಾ ಸಮಿತಿ ಸದಸ್ಯರಾಗಿ ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರು, ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ನೇಮಕಗೊಂಡಿದ್ದಾರೆ.