ತಾಲೂಕಿನ ವಿವಿದೆಡೆ ಭೂಕಂಪನವಾಗುತ್ತಿರುವ ಹಿನ್ನಲೆಯಲ್ಲಿ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು ಸಾಮೂಹಿಕ ಪ್ರಾರ್ಥನೆ ಮಾಡಿ ಪ್ರಾಕೃತಿಕ ವಿಕೋಪ ಉಂಟಾಗದಂತೆ ಬೇಡಿಕೊಳ್ಳಲಾಯಿತು.
ತೊಡಿಕಾನ ಸುತ್ತಮುತ್ತ ಕಂಪನದ ಕೇಂದ್ರವೂ ಇರುವುದಾಗಿ ತಜ್ಞರು ಮಾಹಿತಿ ನೀಡಿದ್ದು, ಇದರಿಂದ ಜನರು ಭಯಭೀತರಾಗಿದ್ದು , ಇದರಿಂದ ಊರಿಗೆ ಸಮಸ್ಯೆ ಉಂಟಾಗದಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು , ಜೀರ್ಣೋದ್ಧಾರ ಸಮಿತಿ , ಸಿಬ್ಬಂದಿಗಳು, ಊರವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.