ಭಾರೀ ಮಳೆಯ ಕಾರಣದಿಂದಾಗಿ ಬಳ್ಪದ ಬೋಗಾಯನ ಕೆರೆ ಸಮೀಪ ಕಿರುಗಾತ್ರದ ಉಪ್ಪಳಿಕೆ ಮರವೊಂದು ರಸ್ತೆಗೆ ಉರುಳಿ ಬಿದ್ದ ಕಾರಣ ಸ್ವಲ್ಪ ಹೊತ್ತು ಬಸ್ ಸಂಚಾರ ಆತಂಕಿತಗೊಂಡ ಘಟನೆ ವರದಿಯಾಗಿದೆ.
ಇಂಫು ಮಧ್ಯಾಹ್ನ 3.30 ರ ಸುಮಾರಿಗೆ ಘಟನೆ ನಡೆಯಿತು. ಕಾರು, ಬೈಕ್ ಗಳು ನಿರಾತಂಕವಾಗಿ ಸಾಗುತ್ತಿದ್ದವು. ಆದರೆ ಬಸ್ ದಾಟಲು ಆಗುತ್ತಿರಲಿಲ್ಲ. ಆ ದಾರಿಯಾಗಿ ಬಂದ ಬಸ್ಸೊಂದರಲ್ಲಿ ಇದ್ದ ಗರಗಸದ ಮೂಲಕ ಗೆಲ್ಲುಗಳನ್ನು ಕೊಯ್ದು ಸಂಚಾರಕ್ಕೆ ತೆರವುಗೊಳಿಸಲಾಯಿತು.