ಆಲೆಟ್ಟಿ ಗ್ರಾಮದ ಎಲಿಕ್ಕಳ ಕಾವೇರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪಾಜೆ ವಲಯದ ಆಲೆಟ್ಟಿ, ಆಲೆಟ್ಟಿ ಬಿ, ಕೋಲ್ಚಾರು, ಬಡ್ಡಡ್ಕ ಕಲ್ಲಪಳ್ಳಿ ಭಾಗದ ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭದಲ್ಲಿ
ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆಗೆ ಪುರಸ್ಕಾರ ಪ್ರತಿಜ್ಞಾ ವಿಧಿಯನ್ನು ಕೈಗೊಳ್ಳುವ ಮೂಲಕ ಸುದ್ದಿಯ ಜನಾಂದೋಲನಕ್ಕೆ ಬೆಂಬಲ ನೀಡಿದರು.
ಆಲೆಟ್ಟಿ ಗ್ರಾಮದ ಎಲ್ಲಾ ಭಾಗದ ಸುಮಾರು 1000 ಮಿಕ್ಕಿ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವೇದಿಕೆಯಲ್ಲಿ ಯೋಜನೆಯ ನಿರ್ದೇಶಕರಾದ ಪ್ರವೀಣ್ ಕುಮಾರ್, ತಾ.ಪಂ.ಇ.ಒ ಭವಾನಿಶಂಕರ, ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ,ಪಂಚಾಯತ್ ಅಧ್ಯಕ್ಷ ಪುಷ್ಪಾವತಿ ಕುಡೆಕಲ್ಲು, ಬಡ್ಡಡ್ಕ ರಾಮಕೃಷ್ಣ ಶಾಲೆಯ ಸಂಚಾಲಕ ಜ್ಞಾನೇಶ್ ಎನ್.ಎ, ಡಾ.ಕೇಶವ ಪಿ.ಕೆ, ಪುರುಷೋತ್ತಮ ಕೋಲ್ಚಾರು, ಪುರುಷೋತ್ತಮ ನಡುಮನೆ,ಶ್ರೀಕಾಂತ್ ಗೋಳ್ವಾಲ್ಕರ್,ರಾಧಾಕೃಷ್ಣ ಪೆರುಮುಂಡ, ಜಗದೀಶ್ ಬಡ್ಡಡ್ಕ, ಸುನಂದಿ ಕೋಲ್ಚಾರು ಮತ್ತಿತರರು ಉಪಸ್ಥಿತರಿದ್ದರು.