ಸುಳ್ಯದ 11೦ ಕೆ.ವಿ. ವಿದ್ಯುತ್ ಕೇಂದ್ರ ಸ್ಥಾಪನೆಗೆ ಕೇಂದ್ರದ ಪರಿಸರ ಇಲಾಖೆಯ ಅನುಮತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸರಕಾರದ ಒಪ್ಪಿಗೆ ಪಡೆದು ಶೀಘ್ರ ಕಾಮಗಾರಿ ಆರಂಭ : ಸಚಿವ ಅಂಗಾರ ವಿಶ್ವಾಸ

ಸುಳ್ಯದ ಬಹುವರ್ಷದ ಬೇಡಿಕೆಯಾಗಿದ್ದ 11೦ ಕೆ.ವಿ. ಸಬ್‌ಸ್ಟೇಶನ್ ಲೈನ್ ಹಾದು ಬರುವ ಜಾಗ ಅರಣ್ಯ ಪ್ರದೇಶವಾಗಿದ್ದು ಇದುವರೆಗೆ ಇದ್ದ ಸಮಸ್ಯೆ ನಿವಾರಣೆಯಾಗಿದೆ. ಇದೀಗ ಕೇಂದ್ರ ಪರಿಸರ ಇಲಾಖೆಯ ಅನುಮತಿ ದೊರೆತಿದ್ದು, ಇನ್ಣೂ ರಾಜ್ಯ ಸರಕಾರದ ಒಪ್ಪಿಗೆ ಪಡೆದು ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಚಿವ ಎಸ್.ಅಂಗಾರ ಹೇಳಿದ್ದಾರೆ.

ಜು.5ರಂದು ಸುಳ್ಯ ತಾಲೂಕು ಪಂಚಾಯತ್‌ನ ಸಚಿವರ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ಈ ವಿಷಯ ತಿಳಿಸಿದರು.
ಸುಳ್ಯದಲ್ಲಿ 11೦ ಕೆ.ವಿ. ಸ್ಥಾಪನೆ ಮಾಡಿ ಇಲ್ಲಿಯ ವಿದ್ಯುತ್ ಸಮಸ್ಯೆ ನಿವಾರಿಸಲು ಕಳೆದ 18 ವರ್ಷಗಳಿಂದ ಪ್ರಯತ್ನ ಮಾಡಲಾಗಿತ್ತು. ಅರಣ್ಯದ ಸಮಸ್ಯೆ ಇದ್ದುದರಿಂದಾಗಿ ಯಶಸ್ವಿಯಾಗಿರಲಿಲ್ಲ. ಇತ್ತೀಚೆಗೆ ಇಂಧನ ಸಚಿವ ವಿ.ಸುನಿಲ್ ಕುಮಾರ್, ಅರಣ್ಯ ಸಚಿವ ಉಮೇಶ್ ಕತ್ತಿ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಲೈನ್ ಹಾದು ಬರುವ ಜಾಗ ಅರಣ್ಯ ಪ್ರದೇಶವಾಗಿರುವುದರಿಂದ ಅರಣ್ಯಕ್ಕೆ ಬೇರೆ ಎರಡು ಪಟ್ಟು ಜಾಗ ಕೊಡಬೇಕಾದುದರಿಂದ ತುಮಕೂರಿನಲ್ಲಿ ಈ ಹಿಂದೆಯೇ ಜಾಗ ನೀಡಲಾಗಿತ್ತು. ಆದರೆ ಕೆಲವು ಕಡೆ ಅರಣ್ಯ ಇಲಾಖೆಯ ಜಾಗವನ್ನು ಗೇರು ಅಭಿವೃದ್ಧಿ ನಿಗಮಕ್ಕೆ ಲೀಸಿಗೆ ನೀಡಲಾಗಿದ್ದು ಅದಕ್ಕೆ ಪರಿಹಾರ ಕೊಡಬೇಕಾಗಿ ಬಂದಿದೆ. ಅದಕ್ಕೆ ಪರಿಹಾರ ಕೊಡಲು ಕೆ.ಪಿ.ಟಿಸಿಎಲ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಏನೆ ಸಮಸ್ಯೆ ಇದ್ದರೂ ಪರಿಹಾರ ಆಗಬೇಕೆಂದು ಇಂಧನ ಸಚಿವರು ಧೃಢ ನಿರ್ಧಾರ ಕೈಗೊಂಡು ಉಳಿಕೆ ಕೆಲಸ ನಡೆಸಲಾಯಿತು. ಮತ್ತು ಕೇಂದ್ರದ ಪರಿಸರ ಇಲಾಖೆಯ ಒಪ್ಪಿಗೆಯೂ ಬೇಕಿತ್ತು. ಇದೀಗ ನಮ್ಮೆಲ್ಲರ ಪ್ರಯತ್ನದಿಂದ ಕೇಂದ್ರ ಪರಿಸರ ಇಲಾಖೆಯ ಅನುಮತಿ ದೊರೆತಿದೆ.

ಇದರಿಂದ ೧೧೦ ಕೆ.ವಿ. ಸ್ಥಾಪನೆಗಿದ್ದ ದೊಡ್ಡ ಸಮಸ್ಯೆಯೊಂದು ನಿವಾರಣೆಯಾಗಿದೆ ಆದ್ದರಿಂದ ಮಾಡಾವಿನಿಂದ ಸುಳ್ಯಕ್ಕೆ ಬರುವ ೧೧೦ ಕೆವಿ ವಿದ್ಯುತ್ ಲೈನ್ ಕಾಮಗಾರಿ ಆರಂಭ ಶೀಘ್ರ ಆಗುತ್ತದೆ. ಸರಕಾರದ ಒಪ್ಪಿಗೆಯನ್ನು ನಾವು ಪಡೆದುಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು.
೧೧೦ ಕೆ.ವಿ. ಕಾಮಗಾರಿ ಆಗುತ್ತದೋ ಇಲ್ಲವೋ ಎನ್ನುವ ಕುರಿತು ಜನರಿಗೆ ಸಂಶಯ ಇತ್ತು. ಅದಕ್ಕೆ ಈಗ ತೆರೆ ಬಿದ್ದಿದೆ ಎಂದು ಹೇಳಿದ ಅವರು ಸಾಕಷ್ಟು ಟೀಕೆಗಳೂ ಬಂದಿತ್ತು. ಅದಕ್ಕೆಲ್ಲ ಈ ಕೆಲಸ ಉತ್ತರ ನೀಡುತ್ತದೆ ಎಂದು ಹೇಳಿದರು.


ಪರಿಸರ ಇಲಾಖೆ ಅನುಮತಿ ನೀಡುವ ಸಂದರ್ಭ ಕೆಲವೊಂದು ನಿಯಮ ಪಾಲಿಸಬೇಕೆಂದು ತಿಳಿಸಿದೆ. ೧೧೦ ಕೆ.ವಿ. ಲೈನ್ ನ ನಿರ್ಮಾಣ ಮತ್ತು ಸ್ಥಿತೀಕರಣದ ನಂತರ ಬಳಕೆದಾರ ಏಜೆನ್ಸಿಯ ಅಸ್ಥಿತ್ವದಲ್ಲಿರುವ ೩೩ ಕೆ.ವಿ. ಲೈನ್‌ನ ಉಪಯುಕ್ತತೆಯನ್ನು ಪರಿಶೀಲಿಸುತ್ತದೆ. ಒಂದು ವೇಳೆ ೩೩ ಕೆ.ವಿ. ಲೈನ್ ಅಗತ್ಯವಿಲ್ಲದಿದ್ದರೆ ಅರಣ್ಯ ಭೂಮಿಯಲ್ಲಿ ಹಾದುಹೋಗುವ ವಿದ್ಯುತ್ ಮಾರ್ಗವನ್ನು ತೆರವು ಮಾಡಬೆಕು. ಮತ್ತು ಅರಣ್ಯ ಭೂಮಿಯನ್ನು ಪುನಃ ಅರಣ್ಯ ಇಲಾಖೆಗೆ ಒದಗಿಸಬೇಕು. ಮರ ಕಡಿಯುವುದನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಬೇಕು. ಅರಣ್ಯ ಭೂಮಿಯಲ್ಲಿ ಕಾರ್ಮಿಕ ಶಿಬಿರ ಮಾಡಬಾರದು. ಈ ಯೋಜನೆಗೆ ಒಟ್ಟು ಅರಣ್ಯ ಪ್ರದೇಶವು ೧೫,೬೮೧೨ ಹೆಕ್ಟೇರ್ ಮೀರಬಾರದು. ಪಕ್ಕದ ಪ್ರದೇಶದ ಸಸ್ಯ ಹಾಗೂ ಪ್ರಾಣಿಗಳಿಗೆ ಹಾನಿಯಾಗಬಾರದು ಇತ್ಯಾದಿ ಷರತ್ತುಗಳನ್ನು ಇಟ್ಟುಕೊಂಡೇ ಕಾಮಗಾರಿ ನಡೆಸಲಾಗುವುದೆಂದು ಸಚಿವರು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ನ.ಪಂ. ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಪ್ರಮುಖರಾದ ಸುಭೊದ್ ಶೆಟ್ಟಿ ಮೇನಾಲ, ಚನಿಯ ಕಲ್ತಡ್ಕ, ವೆಂಕಟ್ ದಂಬೆಕೋಡಿ, ಸುನಿಲ್ ಕುಮಾರ್ ಕೇರ್ಪಳ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಪ್ರಸಾದ್ ಕಾಟೂರು ಇದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.