ರೋಟರಿ ಕ್ಲಬ್ ಸುಬ್ರಹ್ಮಣ್ಯ ಪದಗ್ರಹಣ ಸಮಾರಂಭ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಸೀತಾರಾಮ ರೈಯವರಿಗೆ ಸನ್ಮಾನ

ರೋಟರಿ ಕ್ಲಬ್ ಸುಬ್ರಹ್ಮಣ್ಯ ಇದರ ಪದಗ್ರಹಣ ಸಮಾರಂಭವು ಜು.12  ರಂದು ಮಹಮ್ಮಾಯ ರೆಸಿಡೆನ್ಸಿ ಕುಕ್ಕೆ ಸುಬ್ರಹ್ಮಣ್ಯ ಇಲ್ಲಿ ನಡೆಯಿತು. ಡಿಸ್ಟ್ರಿಕ್ಟ್ ೩೧೮೧ರ ಅಡೈಸರ್ ಸುರೇಶ್ ಚೆಂಗಪ್ಪ ಪದಗ್ರಹಣ ಅಧಿಕಾರಿಯಾಗಿ ಪದಗ್ರಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಝೋನ್ ೫ ರ ಉಪ ರಾಜ್ಯಪಾಲ ಶಿವರಾಮ ಏನೆಕಲ್ಲು, ಝೋನ್ 5 ರ ಝೋನಲ್ ಲೆಪ್ಟಿನೆಂಟ್ ಪ್ರೀತಮ್ ಡಿ ಕೆ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಪೆರಾಲು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಮಣೂರು ವಿದ್ಯಾ ಸಂಸ್ಥೆಗಳ ಅಧ್ಯಕ್ಷ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸೀತಾರಾಮ ರೈ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಗೋಪಾಲ ಎಣ್ಣೆಮಜಲು ಅವರಿಗೆ ನಿಕಟಪೂರ್ವ ಅಧ್ಯಕ್ಷ ವಿ ಜಯಕುಮಾರ್ ಅಮೈ ತನ್ನ ಅಧಿಕಾರವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿವೃತ್ತರಾದ ವಿಶ್ವನಾಥ ನಡುತೋಟ ಇವರನ್ನು ಅಭಿನಂದಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ವಿಜಯಕುಮಾರ್ ಆಮೈಇವರನ್ನು ಕ್ಲಬ್ಬಿನ ವತಿಯಿಂದ ಅಭಿನಂದಿಸಲಾಯಿತು. ಸ್ಥಳೀಯ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಲ್ಮಕಾರಿನ ಹಿ.ಪ್ರಾ.ಶಾಲೆಗೆ ಕೆಲ ಕೊಡುಗೆಗಳನ್ನು ನೀಡಲಾಗಿದ್ದು ಮುಖ್ಯೋಪಾಧ್ಯಾಯಿನಿ ಮಾಲಿನಿ ಲೊಕೇಶ್ ಸ್ವೀಕರಿಸಿದರು.


ಕುಮಾರಿ ಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಕಾರ್ಯಕ್ರಮದಲ್ಲಿ ಗೋಪಾಲ್ ಎಣ್ಣೆಮಜಲು ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
೨೦೨೧ _ ೨೨ ನೇ ಸಾಲಿನ ವಾರ್ಷಿಕ ವರದಿಯನ್ನು ಜಯಪ್ರಕಾಶ್ ಆರ್ ವಾಚಿಸಿದರು. ಕಿಶೋರ್ ಕುಮಾರ್ ಸ್ವಾಗತಿಸಿ, ರವಿ ಕಕ್ಕೆಪದವು ವಂದಿಸಿದರು. ರಾಮಕೃಷ್ಣ ಮಲ್ಲಾರ ಮತ್ತು ಭರತ್ ನೆಕ್ರಾಜೆ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.