ಕಲ್ಮಕಾರು:ಭಾರಿ ಮಳೆ, ತಡರಾತ್ರಿ ಭೂಕುಸಿತ

0

 

ಕೊಚ್ಚಿಹೋದ ಸೇತುವೆಗಳು, ಅಪಾರ ಕೃಷಿ ನಾಶ

 

ಕಲ್ಮಕಾರಿನ ಕಡಮಕಲ್ಲು ಕಾಡಿನಲ್ಲಿ ಭಾರಿ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಹರಿದು ಸೇತುವೆಗಳು ಕೊಚ್ಚಿ ಹೋಗಿವೆ. ಕೃಷಿಕರ ಜಮೀನಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಯಾದ ಘಟನೆ ವರದಿಯಾಗಿದೆ.

ಈಗಲೂ ಮಣ್ಣು ಮಿಶ್ರಿತ ನೀರು ಹರಿದು ಬರುತ್ತಿರುವುದಾಗಿ ತಿಳಿದು ಬಂದಿದೆ.