ಹತ್ಯೆಯಾದ ಪ್ರವೀಣ್, ಮಸೂದ್ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭೇಟಿ

0

 

 

ಮನೆಯವರಿಗೆ ತಲಾ ಐದು ಲಕ್ಷ ಸಹಾಯಧನ ವಿತರಣೆ

ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರ್ ಹಾಗೂ ಗುಂಪು ಹಲ್ಲೆಯಿಂದ ಸಾವಿಗೀಡಾದ ಕಳಂಜದ ಮಸೂದ್ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಭೇಟಿ ಮಾಡಿದ್ದು ಎರಡೂ ಮನೆಯವರಿಗೆ ತಲಾ ಐದು ಲಕ್ಷ ರೂ. ಗಳ ಸಹಾಯಧನದ ಚೆಕ್ ವಿತರಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ಭೋಜೇಗೌಡ, ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ, ಮುಖಂಡರಾದ ಎಂ.ಬಿ.ಸದಾಶಿವ, ಜಾಕೆ ಮಾಧವ ಗೌಡ, ಮಹಮ್ಮದ್ ಕುಂಞಿ ವಿಟ್ಲ, ಮಹಮ್ಮದ್ ಇಕ್ಬಾಲ್ ಎಲಿಮಲೆ, ಸುಕುಮಾರ್ ಕೋಡ್ತುಗುಳಿ ಮೊದಲಾದವರಿದ್ದರು.