ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷರಾಗಿ ಸೀತಾನಂದ ಬೇರ್ಪಡ್ಕ, ಅಧ್ಯಕ್ಷರಾಗಿ ಜನಾರ್ಧನ ಬಿ ಕುರುಂಜಿಭಾಗ್, ಕಾರ್ಯದರ್ಶಿಯಾಗಿ ಬಾಲಕೃಷ್ಣ ನಾಯ್ಕ್ ಅಜ್ಜಾವರ

0
160

p>

 

 

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ 2022-23ನೇ ಸಾಲಿನ ಕಾರ್ಯಕಾರಿ ಸಮಿತಿ ರಚನೆಗೊಂಡಿದ್ದು, ಗೌರವಾಧ್ಯಕ್ಷರಾಗಿ ಸುಳ್ಯ ಲ್ಯಾಂಪ್ ಸೊಸೈಟಿ ಅಧ್ಯಕ್ಷ, ಮರಾಟಿ ಸಂಘದ ನಿಕಟಪೂರ್ವ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ನೂತನ ಅಧ್ಯಕ್ಷರಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿವೃತ್ತ ವ್ಯವಸ್ಥಾಪಕರಾದ ಜನಾರ್ದನ ಬಿ ಕುರುಂಜಿಬಾಗ್ ಆಯ್ಕೆದಾದರೆ ಕಾರ್ಯದರ್ಶಿಯಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ನಾಯ್ಕ್ ಅಜ್ಜಾವರ ಪುನರಾಯ್ಕೆಗೊಂಡಿದ್ದಾರೆ.

 

 

ಉಪಾಧ್ಯಕ್ಷರಾಗಿ ಬಿ.ಎಸ್.ಎನ್.ಎಲ್ ನಿವೃತ್ತ ಉದ್ಯೋಗಿ ಐತ್ತಪ್ಪ ಎನ್, ಜತೆ ಕಾರ್ಯದರ್ಶಿಯಾಗಿ ಪಂಬೆತ್ತಾಡಿ ಸಹಕಾರಿ ಸಂಘದ ನಿರ್ದೇಶಕ ಧರ್ಮಣ್ಣ ನಾಯ್ಕ್ ಗರಡಿ, ಕೋಶಾಧಿಕಾರಿ ಭವಾನಿಶಂಕರ ಕಲ್ಮಡ್ಕ, ಸಂಘಟನಾ ಕಾರ್ಯದರ್ಶಿಯಾಗಿ ಈಶ್ವರ ವಾರಣಾಶಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ ಜನಾರ್ಧನ ನಾಯ್ಕ್ ಕೇರ್ಪಳ, ಮಹಾಮಯಿ ಎಂಟರ್ಪ್ರೈಸಸ್ ನ‌ ಮಾಲಕರಾದ ಮೋನಪ್ಪ ನಾಯ್ಕ್ ಸೌದಾಮಿನಿ, ನಿತ್ಯಾನಂದ ಕುಡೆಂಬಿ, ಬಿ.ಎಸ್. ಎನ್.ಎಲ್. ನಿವೃತ್ತ ಉದ್ಯೋಗಿ ಶ್ರೀಮತಿ ಶೋಭ ಎ.ಕೆ‌. ನಾಯ್ಕ್, ಸುಳ್ಯ ನ.ಪಂ. ಮಾಜಿ ಸದಸ್ಯೆ ಸುಲೋಚನ ನಾರಾಯಣ ನಾಯ್ಕ್ ಆಯ್ಕೆಯಾಗಿದ್ದಾರೆ. ಮಹಿಳಾ ವೇದಿಕೆಯ ಅಧ್ಯಕ್ಷರಾಗಿ ನಿವೃತ್ತ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಗಿರಿಜಾ ಜನಾರ್ಧನ ನಾಯ್ಕ್ ಕೊಡಿಯಾಲಬೈಲು, ಉಪಾಧ್ಯಕ್ಷರಾಗಿ ಮಾಜಿ ನ.ಪಂ. ಸದಸ್ಯೆ ಶ್ರೀಮತಿ ಮೀನಾಕ್ಷಿ ಭಸ್ಮಡ್ಕ, ಕಾರ್ಯದರ್ಶಿಯಾಗಿ ಶ್ರೀಮತಿ ಕುಸುಮಾ ಜನಾರ್ಧನ್ ಕೇರ್ಪಳ, ಜೊತೆ ಕಾರ್ಯದರ್ಶಿಯಾಗಿ ಲ್ಯಾಂಪ್ ಸೊಸೈಟಿ ನಿರ್ದೇಶಕಿ ಶ್ರೀಮತಿ ರೇವತಿ ದೊಡ್ಡೇರಿ, ಸದಸ್ಯರಾಗಿ ಶ್ರೀಮತಿ ನಳಿನಾಕ್ಷಿ ಸೀತಾನಂದ ಬೇರ್ಪಡ್ಕ, ಶ್ರೀಮತಿ ಪದ್ಮಾವತಿ ಸುಳ್ಯ, ಚಿತ್ರನಟಿ ಶ್ರೀಮತಿ ಶೋಭ ಕೆ ಪಂಜಿಗಾರು, ಲ್ಯಾಂಪ್ ಸೊಸೈಟಿ ಮಾಜಿ ನಿರ್ದೇಶಕಿ ಶ್ರೀಮತಿ ಕುಸುಮಾ ನೆಲ್ಲೂರು ಕೆಮ್ರಾಜೆ, ಶ್ರೀಮತಿ ಜಯಂತಿ ಪೈಚಾರು, ಶ್ರೀಮತಿ ಚಂದ್ರಲೇಖ ಆಲೆಟ್ಟಿ, ಶ್ರೀಮತಿ ಪುಷ್ಪಲತಾ ದೊಡ್ಡೇರಿ ಆಯ್ಕೆಯಾಗಿದ್ದಾರೆ. ಮರಾಟಿ ಯುವ ವೇದಿಕೆಯ ಅಧ್ಯಕ್ಷರಾಗಿ ಮೋಹನ್ ಪೆರಾಜೆ, ಉಪಾಧ್ಯಕ್ಷರಾಗಿ ಗಿರಿಯಪ್ಪ ನಾಯ್ಕ್, ಕಾರ್ಯದರ್ಶಿಯಾಗಿ ಉದಯ ಮಾಣಿಬೆಟ್ಟು, ಜತೆ ಕಾರ್ಯದರ್ಶಿಯಾಗಿ ರಮೇಶ್ ನೀರಬಿದಿರೆ ಸದಸ್ಯರುಗಳಾಗಿ ರಮೇಶ್ ಮಠತ್ತಡ್ಕ, ಚೆನ್ನಕೇಶವ ಕಣಿಪ್ಪಿಲ, ಅಶೋಕ್ ದೊಡ್ಡೇರಿ, ಶಶಿಧರ ಆಲೆಟ್ಟಿ, ಮನಮೋಹನ್ ಕುರುಂಜಿಗುಡ್ಡೆ, ಪ್ರಮೋದ್ ಆಲೆಟ್ಟಿ ಮತ್ತು ದಿನೇಶ್ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here