ಮಸೂದ್ ಮನೆಗೆ ಭೇಟಿ ನೀಡಿದ ಹೆಚ್‌ಡಿ ಕುಮಾರಸ್ವಾಮಿ

0
356

ಘಟನೆಯ ಕುರಿತು ಮನೆಯವರಿಂದ ಮಾಹಿತಿ ಪಡೆದ ಮಾಜಿ ಮುಖ್ಯಮಂತ್ರಿ

p>

ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಕಳಂಜದ ಮಸೂದ್ ಮನೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಭೇಟಿ ನೀಡಿದರು.

ಮನೆಯ ಪರಿಸ್ಥಿತಿಯನ್ನು ತಿಳಿದುಕೊಂಡ ಹೆಚ್.ಡಿ.ಕುಮಾರಸ್ವಾಮಿಯವರು ಮಸೂದ್‌ನ ಮಾವ, ಅಣ್ಣ ಮತ್ತು ತಾಯಿಯೊಂದಿಗೆ ಘಟನೆಯ ಪೂರ್ಣ ಪರಿಸ್ಥಿತಿ ತಿಳಿದುಕೊಂಡರು. ಯಾವ ಕಾರಣಕ್ಕಾಗಿ ಕೊಲೆ ನಡೆದಿರಬಹುದು ಎಂಬ ಮಾಹಿತಿಯನ್ನು ಮನೆಯಲ್ಲಿದ್ದ ಮುಸ್ಲಿಂ ಮುಖಂಡರಿಂದ ಪಡೆದುಕೊಂಡರು. ಅಪರಾಧಿಗಳೆಲ್ಲ ಬಂಧನವಾಗಿದೆಯೇ ಎಂದು ಕೇಳಿ ತಿಳಿದುಕೊಂಡರು.
ಬಳಿಕ ತಾಯಿಗೆ ೫ ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.

 

LEAVE A REPLY

Please enter your comment!
Please enter your name here