ಪ್ರವೀಣ್ ಹತ್ಯೆ ತನಿಖೆಯನ್ನು ಸರಕಾರ ಎನ್‌ಐಎ ಗೆ ಒಪ್ಪಿಸಿ ಜವಾಬ್ದಾರಿಯಿಂದ ನುಣುಚಿಕೊಂಡಿದೆ

0
399

ಮನೆಯವರಿಗೆ ಕೆಲ ದಿನದ ಅನುಕಂಪ ಬೇಡ, ಶಾಶ್ವತ ನ್ಯಾಯ ಸಿಗಲಿ

p>

ನೆಟ್ಟಾರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ

ಪ್ರವೀಣ್ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ಒಪ್ಪಿಸಿ ಸರಕಾರ ಜವಾಬ್ದಾರಿಯಿಂದ ನುಣುಚಿಕೊಂಡಿದೆ. ರಾಜ್ಯದಲ್ಲೇ ಅತ್ಯುತ್ತಮ ಪೊಲೀಸ್ ಅಧಿಕಾರಿಗಳಿದ್ದರೂ ತನಿಖೆಯನ್ನು ಅವರಿಗೆ ವಹಿಇಸದೆ ತಮ್ಮ ಬೇಜವಾಬ್ದಾರಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಘಟನೆಗಳಾದಾಗ ೨ ದಿನ ಅನುಕಂಪ ವ್ಯಕ್ತಪಡಿಸಿ ಸುಮ್ಮನಿರುವುದಲ್ಲ. ಇಂತಹ ಘಟನೆಗಳಾಗದಂತೆ ನೋಡಿಕೊಳ್ಳಲು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಎನ್‌ಐಎ ಗೆ ಒಪ್ಪಿಸಿದ ಎಷ್ಟೋ ಪ್ರಕರಣಗಳು ಇನ್ನೂ ಕೂಡಾ ಬಯಲಿಗೆ ಬಂದಿಲ್ಲ. ಈ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಕೇವಲ ಕಾಟಾಚಾರದ ತನಿಖೆ ಅಗತ್ಯವಿಲ್ಲ. ಇದರ ಹಿಂದಿರುವ ಶಕ್ತಿಗಳು ಎಷ್ಟೇ ದೊಡ್ಡದಾದರೂ ಅದನ್ನು ಬಯಲಿಗೆ ಎಳೆಯಬೇಕು. ಈ ವಿಚಾರವನ್ನು ಸರಕಾರದ ಗಮನಕ್ಕೂ ತರುವುದಾಗಿ ಕುಮಾರಸ್ವಾಮಿ ಹೇಳಿದರು.
ಅವರ ಸಂಸಾರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಏನೇ ಸಮಸ್ಯೆ ಬಂದರೂ ನನಗೆ ಕರೆ ಮಾಡಿ ಎಂದು ನಂಬರ್ ಕೊಟ್ಟಿದ್ದೇನೆ. ಕುಟುಂಬಕ್ಕೆ ಸಧ್ಯ 5 ಲಕ್ಷ ಪರಿಹಾರ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

LEAVE A REPLY

Please enter your comment!
Please enter your name here