ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

0
68

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು ಸಭೆಯಲ್ಲಿ ಭೂಕಂಪ ಸಂದರ್ಭದಲ್ಲಿ ಹಾನಿಯದ ಮನೆಗಳಿಗೆ ಪರಿಹಾರ ದೊರಕದಿರುವುದು, ಮನೆಗೆ ಮರ ಬಿದ್ದು ಹಾನಿಯಾಗಿ ಪರಿಹಾರ ದೊರಕದಿರುವುದು, ಬೆಂಕಿ ಅವಘಡ ಆದಾಗ ಪರಿಹಾರ ನೀಡದಿರುವುದನ್ನು ಸದಸ್ಯರುಗಳು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ತುರ್ತು ಪರಿಹಾರ ನೀಡಲು ಒತ್ತಾಯ ಮಾಡಲು ತೀರ್ಮಾನಿಸಲಾಯಿತು.

p>

ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿ ಕ್ರಷಿಗೆ ಹಾನಿಯಾಗಿದೆ, ಸಂಪಾಜೆ ಗ್ರಾಮಕ್ಕೆ ವಿಶೇಷ ಅನುದಾನ ನೀಡಲು ನಿರ್ಣಯ ಕೈಗೊಳ್ಳಲಾಯಿತು. ಬೆಂಕಿ ಅವಘಡದಿಂದ ಹಾನಿಯದ ಅಂಗಡಿಯವರು ಎಲ್ಲವನ್ನು ಕಳೆದುಕೊಂಡವಾರದ ಕಾರಣ ಪಂಚಾಯತ್ ಸದಸ್ಯರುಗಳು ಸಿಬ್ಬಂದಿಗಳು ಸೇರಿ ಅವರಿಗೆ ಸಹಾಯ ಮಾಡಲು ತೀರ್ಮಾನಿಸಲಾಯಿತು. ಸಂಪಾಜೆ ಗ್ರಾಮದಲ್ಲಿ ತುರ್ತು ಸಂದರ್ಭದಲ್ಲಿ ಯಾರಿಗೂ ಪರಿಹಾರ ನೀಡದ ಬಗ್ಗೆ ಬಹಳ ಹೊತ್ತು ಚರ್ಚೆ ನಡೆಯಿತು. ಸ್ವಾತಂತ್ರೋತ್ಸವದ ದಿನ ಪ್ರತಿಯೊಂದು ಮನೆಗೆ ತಿರಂಗ ಹಂಚಲು ಸಂಜೀವಿನಿ ಒಕ್ಕೂಟದ ಮೂಲಕ ವೆವಸ್ಥೆ ಮಾಡಲು ತೀರ್ಮಾನಿಸಲಾಯಿತು. ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ನಡೆಸಲು ತೀರ್ಮಾನಿಸಲಾಯಿತು. . ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಪರಿಶೀಲನೆ ಮಾಡಲಾಯಿತು ಸಭೆಯಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರುಗಳಾದ ಜಗದೀಶ್ ರೈ, ಅಬೂಸಾಲಿ ಗೂನಡ್ಕ, ಎಸ್. ಕೆ. ಹನೀಫ್, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ಸವಾದ್, ರಜನಿ, ವಿಜಯ ಕುಮಾರ್, ಅನುಪಮಾ, ಸುಶೀಲ, ವಿಮಲಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here