ಕುಕ್ಕೆ ಸುಬ್ರಹ್ಮಣ್ಯದಲ್ಲಿ ದುರಂತ

0

 

ಮಣ್ಣಿನಡಿ ಸಿಲುಕಿದ ಮಕ್ಕಳ ಪತ್ತೆಗೆ ಕಾರ್ಯಾಚರಣೆ

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಂದು ಭಾರಿ ಅನಾಹುತ ಸಂಭವಿಸಿದ್ದು, ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.

ಸುಬ್ರಹ್ಮಣ್ಯದ ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿನ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿದ್ದಾರೆ.

ಮೂಲತಹ ಪಂಜದ ಕುಸುಮಾಧರ ಕರಿಮಜಲು ಎಂಬವರ ಮನೆ ಕುಮಾರಧಾರ ಸಮೀಪದಲ್ಲಿದ್ದು , ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳಾದ ಶ್ರುತಿ ಮತ್ತು ಜ್ಞಾನಶ್ರೀ ಮಣ್ಣುಪಾಲಾಗಿದ್ದಾರೆ.

ಜೆಸಿಬಿ ತರಿಸಿ ದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.

 

ಕುಮಾರಧಾರಾದಿಂದ ಪಂಜ ಕಡೆಗೆ ಹೋಗುವ ರಸ್ತೆ ನೆರೆ ನೀರಲ್ಲಿ ಪೂರ್ಣ ಮುಳುಗಿರುವುದರಿಂದ ಮತ್ತು ಮರ ಕೂಡ ಬಿದ್ದಿರುವುದರಿಂದ ರಸ್ತೆ ಬಂದ್ ಆಗಿದ್ದು ಪರಿಹಾರ ಕಾರ್ಯಕ್ಕೆ ತೊಂದರೆ ಉಂಟಾಗಿದೆ.

ಕುಸುಮಾಧರ ಅವರಿಗೆ ಪರ್ವತಮಕ್ಕಿಯಲ್ಲಿ ಅಂಗಡಿ ಇದ್ದು ಅವರು ಅಂಗಡಿಯಲ್ಲಿದ್ದರು. ಪತ್ನಿ‌ ಮತ್ತು ಸಣ್ಣ ಮಗಳು ಕೂಡಾ ಹೊರಗಿದ್ದರು.‌ ಇಬ್ಬರು ಹೆಣ್ಣುಮಕ್ಕಳು ಶ್ರುತಿ ಮತ್ತು ಜ್ಞಾನಶ್ರೀ ಮನೆಯಲ್ಲಿದ್ದ ವೇಳೆ ಮನೆ ಕುಸಿದುಬಿದ್ದಿದೆ.